ಕಾಮಗಾರಿಗಳ ಬಿಲ್‌ಹಾಗೂ ವರ್ಗಾವಣೆ ವಿಚಾರ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಅವರು, ‘ಮುಖ್ಯಮಂತ್ರಿ ಅವರು ಬಾಕಿ ಬಿಲ್‌ಗಳು, ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುತ್ತಿದ್ದಾರೆ. ಆದರೆ, ಸದ್ಯ ಹೊಸ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ಅನುದಾನ ಎಲ್ಲಿದೆ?’. ‘ನನ್ನ ಇಲಾಖೆಯಲ್ಲೂ ಸಣ್ಣ ಕೆಲಸ ಮಾಡಲೂ ಆಗುತ್ತಿಲ್ಲ. 1.25 ಲಕ್ಷ ಕೋಟಿ ರು. ಕೆಲಸ ನಡೆಯುತ್ತಿದೆ. ಇದಕ್ಕೆ ಹಣ ಬೇಕು, ಜೊತೆಗೆ ಸಂಬಳ, ಸಾಲ ಎಲ್ಲ ಕೊಡಬೇಕು. ಗ್ಯಾರಂಟಿಗಳ ಜಾರಿಗೆ ಅನುದಾನ ಕೊಡಬೇಕಿದೆ. ಈ ಬಜೆಟ್‌ನಲ್ಲಿ ಅನುದಾನ ಕಡಿಮೆಯಾಗಿದೆ. ಹೊಸ ಕಾಮಗಾರಿಗಳಿಗೆ ಮಂಜೂರಾತಿ ನೀಡಬಹುದು. ಆದರೆ, ಹಣವನ್ನೂ ಕೊಡಬೇಕಲ್ವಾ? 16 ಸಾವಿರ ಕೋಟಿ ರು.ನಷ್ಟು ಬಾಕಿ ಬಿಲ್‌ನನ್ನ ಹತ್ತಿರವೇ ಇದೆ. ಅದೇ ರೀತಿ ಇತರೆ ಸಚಿವರಿಗೂ ಸಮಸ್ಯೆ ಇರುತ್ತಲ್ವಾ? ಇದನ್ನೆಲ್ಲಾ ಶಾಸಕರೂ ಅರ್ಥಮಾಡಿಕೊಳ್ಳಬೇಕು’ ಎಂದರು.’ಇನ್ನು ವರ್ಗಾವಣೆ ವಿಚಾರವಾಗಿ ನನ್ನ ಇಲಾಖೆಯಲ್ಲಿ ಸದ್ಯ ಯಾವುದೇ ನಿರ್ಧಾರ ಕೈಗೊಳ್ಳದಂತೆ ಹೇಳಿದ್ದೇನೆ. ವರ್ಗಾವಣೆಗೆ ಸಮಯದ ಮಿತಿ ಇದೆ. ಸಮಯ ಮಿತಿಯಲ್ಲಿ ಮಾಡಲಾಗಿದೆ. ಉಳಿದಿದ್ದು ಮುಖ್ಯಮಂತ್ರಿ ಅವರಿಗೆ ಬಿಡಲಾಗಿದೆ’ ಎಂದರು.