ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ 6 ವರ್ಷ ಅಧಿಕಾರವನ್ನು ಪೂರೈಸಿದ್ದಾರೆ. ಇದನ್ನು ಇಡೀ ರಾಜ್ಯದಲ್ಲಿ ಬಿಜೆಪಿ ಸಂಭ್ರಮಿಸುತ್ತಿದೆ. ಈ ಮೊದಲು ಯಾರೂ ಸತತ 6 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರಲಿಲ್ಲ. ಯೋಗಿ ಆದಿತ್ಯನಾಥನ್ ಈಗ ಈ ಸಾಧನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಇದನ್ನು ಸಂಭ್ರಮಿಸಲು ಹಲವು ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡುತ್ತಿದ್ದಾರೆ.ಅದೇ ರೀತಿ ಪೂರ್ಣಗೊಂಡ ಹಲವು ಯೋಜನೆಗಳನ್ನು ಸಾರ್ವಜನಿಕ ಬಳಕೆಗೆ ತೆರೆದಿದ್ದಾರೆ. ಇದರ ಬೆನ್ನಲ್ಲೇ ಯೋಗಿ ಗೋರಖ್‌ಪುರದಲ್ಲಿ ರೂ.3838 ಕೋಟಿ ಮೌಲ್ಯದ 172 ಯೋಜನೆಗಳನ್ನು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಅವರು, ‘ಉತ್ತರ ಪ್ರದೇಶದ ಜನರು ಕೇವಲ ಯೋಜನೆಗಳಾದರೆ ಸಾಕು ಎನ್ನುವ ಕಾಲವಿತ್ತು. ಶೇ.5ರಿಂದ ಶೇ.10ರಷ್ಟು ಕಾರ್ಯಗಳಾದರೆ ಅದೇ ದೊಡ್ಡ ವಿಚಾರವಾಗಿತ್ತು. ಆದರೆ ಇಂದು ಕೋಟ್ಯಂತರ ರೂ.ಗಳ ಯೋಜನೆಗಳು ಒಂದೇ ದಿನದಲ್ಲಿ ಘೋಷಣೆ ಮಾಡಲಾಗಿದೆ.14 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳು ಕಾರ್ಯ ಹೂಡಿಕೆದಾರರ ಸಮಾವೇಶ-ಗೋರಖ್‌ಪುರದಲ್ಲಿ ಭಾರಿ ಹೂಡಿಕೆ ಇನ್ನೂ ರಸಗೊಬ್ಬರ ಕಾರ್ಖಾನೆ, ನಾಲ್ಕು ಲೇನ್ ಹೆದ್ದಾರಿ, ಆರು ಎಕ್ಸ್‌ಪ್ರೆಸ್‌ವೇಗಳು ಗೋರಖ್‌ಪುರದಲ್ಲಿ ಶೀಘ್ರದಲ್ಲೇ ಬರಲಿವೆ. ಈ ವರ್ಷದ ಆರಂಭದಲ್ಲಿ ನಡೆದ ಹೂಡಿಕೆದಾರರ ಸಮಾವೇಶ ಗೋರಖ್‌ಪುರದಲ್ಲಿ ಭಾರಿ ಹೂಡಿಕೆಯನ್ನು ತೋರಿಸಿದೆ. ಇದರಿಂದ ಗೋರಖ್‌ಪುರದಲ್ಲಿ ದೊಡ್ಡ ಮಾಲ್‌ಗಳು, ಹೋಟೆಲ್‌ಗಳು, ಉದ್ಯಾನವನಗಳು ಬರಲಿವೆ. ಹೀಗಾಗಿ ಉದ್ಯೋಗವಕಾಶಗಳು ಹೆಚ್ಚಾಗಲಿವೆ ಎಂದು ಸಿಎಂ ಯೋಗಿ ಹೇಳಿದರು. ಗೋರಖ್‌ಪುರ ಅಭಿವೃದ್ಧಿ ಯೋಜನೆಗೆ 3838 ಕೋಟಿ ರೂ. ಮೀಸಲು ನವರಾತ್ರಿಯ ಶುಭ ಸಂದರ್ಭದಲ್ಲಿ ಯೋಗಿ ಸರ್ಕಾರ್ ಗೋರಖ್‌ಪುರಕ್ಕೆ ಮಹತ್ವದ ಗಿಫ್ಟ್ ಕೊಟ್ಟಿದ್ದಾರೆ.