ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತ ಅಂತಾ ಹೇಳಿದ್ವಿ. ಇದರನ್ವಯ ವಾರ್ಷಿಕ ಸರಾಸರಿ ಮೇಲೆ 10% ವಿದ್ಯುತ್ ಹೆಚ್ಚು ಬಳಕೆ ಮಾಡಲು ಗ್ರಾಹಕರಿಗೆ ಅವಕಾಶ ನೀಡಲಾಗಿತ್ತು. ಕೇವಲ 20, 30, 40 ಯೂನಿಟ್ ಬಳಕೆ ಮಾಡುವ ಗ್ರಾಹಕರಿಗೆ 10% ಹೆಚ್ಚುವರಿ ಯೂನಿಟ್ ಅಂದರೆ ಕಡಿಮೆ ವಿದ್ಯುತ್ ಸಿಗುತ್ತಿತ್ತು. ಹೀಗಾಗಿ 48 ಯೂನಿಟ್ ಒಳಗೆ ಉಪಯೋಗ ಮಾಡುವ ಗ್ರಾಹಕರಿಗೆ 10% ವಿದ್ಯುತ್ ಬದಲಾಗಿ 10 ಯೂನಿಟ್ ಹೆಚ್ಚುವರಿ ನೀಡಲು ಕ್ಯಾಬಿನೆಟ್ ಒಪ್ಪಿಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮುಂದಿನ ತಿಂಗಳ ಬಿಲ್ನಿಂದಲೇ ಇದನ್ನ ಜಾರಿ ಮಾಡ್ತೀವಿ. ಸರ್ಕಾರಕ್ಕೆ ಇದರಿಂದ 500 ಕೋಟಿ ರೂ. ವಾರ್ಷಿಕ ಹೆಚ್ಚುವರಿ ಹಣ ಖರ್ಚಾಗಲಿದೆ ಎಂದು ತಿಳಿಸಿದ್ದಾರೆ.