ಗ್ರಾಮಾಂತರ ಕ್ಷೇತ್ರದಲ್ಲಿ ಸಾಕಷ್ಟು ಚುನಾವಣಾ ಅವ್ಯವಹಾರ ನಡೆಯುತ್ತಿದೆ. ಚುನಾವಣೆಗೆ ಹಂಚೋದಕ್ಕಾಗಿ ಕಾಂಗ್ರೆಸ್ನವರು 8 ಲಕ್ಷ ಕುಕ್ಕರ್ ಸಂಗ್ರಹಿಸಿದ್ದಾರೆ. ಮನೆ-ಮನೆಗಳಿಗೆ ಹೋಗಿ ದುಡ್ಡು ಕೊಡ್ತಿದ್ದಾರೆ. ಈ ಅಕ್ರಮಗಳನ್ನು ತಡೆಯಲು ಪ್ಯಾರಾ ಮಿಲಿಟರಿ ಫೋರ್ಸ್ ಬರಬೇಕು ಎಂದು ಆರ್ಆರ್ ನಗರ ಶಾಸಕ ಮುನಿರತ್ನ ಆಗ್ರಹಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.ಕೆ ಸುರೇಶ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣೆಗೆ ಹಂಚಲು ಕಾಂಗ್ರೆಸ್ನವರು ಕುಕ್ಕರ್, ಸೀರೆ ಸಂಗ್ರಹ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಳ್ತಿಲ್ಲ. ದಾಳಿ ಮಾಡಿದ್ರೆ ತೊಂದರೆ ಆಗುತ್ತೆ ಅಂತಾ ಹೆದರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಲಕ್ಷ ಲಕ್ಷ ಆಮಿಷ
ಗೋಮಾಂಸವ್ಯಾಪಾರಿಗಳೇರಸ್ತೆತೆರವುಮಾಡಿಸಿದ್ದಾರೆ: ಯಶವಂತಪುರ ರೈಲು ನಿಲ್ದಾಣಕ್ಕೆ ಎಲ್ಲ ಭಾಗಗಳಿಂದಲೂ ರೈಲುಗಳು ಬರುತ್ತವೆ. ನಮ್ಮ ಸರ್ಕಾರ ಇದ್ದಾಗ ಜನರು ಓಡಾಡಲು ಅಲ್ಲಿ ಅಲ್ಲಿ ಒಂದು ರಸ್ತೆ ಮಾಡಲಾಗಿತ್ತು. ಪಕ್ಕದಲ್ಲೇ ಹೆರಿಗೆ ಆಸ್ಪತ್ರೆ, ಕೋವಿಡ್ ಆಸ್ಪತ್ರೆ ಇದೆ. ಜನರು ಸಹ ಈ ರಸ್ತೆಯನ್ನು ಹೆಚ್ಚಾಗಿಯೇ ಸದ್ಬಳಕೆ ಮಾಡಿಕೊಳ್ಳುತ್ತಿದ್ದರು. ಆದ್ರೆ ಅಲ್ಲಿರುವ ಗೋಮಾಂಸ ವ್ಯಾಪಾರಿಗಳು ಈ ರಸ್ತೆಯಿಂದ ತೊಂದರೆ ಆಗ್ತಿದೆ. ತೆರವು ಮಾಡಿಸಿಕೊಡಿ ಅಂತಾ ಮನವಿ ಮಾಡಿದ್ರು. ಅವರ ಮನವಿಗೆ ಒಪ್ಪಿ ಸಂಸದರು ರಸ್ತೆಯ ಪರಿಶೀಲನೆ ಮಾಡಿದ್ರು. ಈಗ ಜನರಿಗೆ ಅನುಕೂಲ ಆಗುವ ಈ ರಸ್ತೆಯನ್ನೇ ತೆರವು ಮಾಡಲು ಹೊರಟಿದ್ದಾರೆ. ಗೋಮಾಂಸ ವ್ಯಾಪಾರಿಗಳಿಗೆ ಅನುಕೂಲವಾಗಲು ರಸ್ತೆ ತೆರವು ಮಾಡುವಂತೆ ಅಧಿಕಾರಿಗಳಿಗೆ ಸಂಸದರು ಮೌಖಿಕ ಆದೇಶ ಮಾಡ್ತಾರೆ. ಅಧಿಕಾರಿಗಳು ಈ ರಸ್ತೆ ತೆರವು ಮಾಡಕ್ಕಾಗಲ್ಲ ಅಂತ ಹೇಳಿದ್ದಾರೆ. ಈ ಮಧ್ಯೆ ದನದ ಮಾಂಸ ವ್ಯಾಪಾರಿಗಳೇ ಜೆಸಿಬಿ ತಂದು ರಸ್ತೆ ತೆರವು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.