ಕರ್ನಾಟಕದ 50ನೇ ವರ್ಷದ ಸಂಭ್ರಮಾಚರಣೆ ಹಿನ್ನೆಯಲ್ಲಿ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ರಾಜ್ಯಕ್ಕೆ ಕರ್ನಾಟಕ ನಾಮಕರಣ ಆಗಿ ನವೆಂಬರ್ ತಿಂಗಳಿಗೆ 50ವರ್ಷ ತುಂಬುತ್ತಿವೆ. ಈ ಸಂಧರ್ಭದಲ್ಲಿ ಕನ್ನಡ ಹಬ್ಬಕ್ಕೆ ಲಾಂಛನ ಬಿಡುಗಡೆ ಮಾಡಿದ್ದೇವೆ. ಅದನ್ನ ವಿನ್ಯಾಸ ಗೊಳಿಸದವರು ರವಿರಾಜ್ ಜಿ. ಹುಲಗುರು ಆಗಿದ್ದಾರೆ. ವಾಸ್ತವವಾಗಿ ಕರ್ನಾಟಕ 50ರ ಸಂಭ್ರಮವನ್ನ ಕಳೆದ ವರ್ಷ ಆಚರಣೆ ಮಾಡಬೇಕಾಗಿತ್ತು. ಆದರೆ ಹಿಂದಿನ ಸರ್ಕಾರ ಮಾಡಿಲ್ಲ. ಹೀಗಾಗಿ, ನಾನು ಬಜೆಟ್ ನಲ್ಲಿಯೇ ಕರ್ನಾಟಕ 50ನೇ ವರ್ಷದ ಸಂಭ್ರಮಾಚರಣೆ ಬಗ್ಗೆ ಉಲ್ಲೇಖಿಸಿದ್ದೇನೆ. ಇಡೀ ವರ್ಷ ಈ ಹಬ್ಬ ಆಚರಣೆ ಮಾಡಲಿದ್ದೇವೆ. ಈಗ ಸಿದ್ಧಪಡಿಸಿರುವ ಲಾಂಛನದಲ್ಲಿ ಹೆಸರಾಯಿತು ಕನ್ನಡ ಉಸಿರಾಯಿತು ಕನ್ನಡ ಎಂಬ ಘೋಷಣಾ ವ್ಯಾಕ್ಯ ಇದೆ ಎಂದು ಹೇಳಿದರು.ಕನ್ನಡ ನಾಡಿನಲ್ಲಿ ವಾಸ ಮಾಡುತ್ತಿರುವ ಪ್ರತಿಯೊಬ್ಬರು ಕನ್ನಡ ಮಾತನಾಡಬೇಕು. ನಾವು ತಮಿಳುನಾಡಿಗೆ ಹೋಗಿ ತಮಿಳು ಗೊತ್ತಿಲ್ಲದೆ ನಾವು ಬದಕಲ್ಲ ಆಗುತ್ತಾ? ಆದ್ರೆ, ಇಲ್ಲಿ ಮಾತ್ರಾ ಕನ್ನಡ ಗೊತ್ತಿಲ್ಲದೆ ಇದ್ದರೂ ಬದಕಬಹುದು ಹೇಗಿದೆ ನೋಡಿ ? ಕರ್ನಾಟಕದವರು ವಿಶಾಲ ಹೃದಯದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.