ಇಸ್ರೇಲ್-ಹಮಾಸ್ ಯುದ್ಧದ ನಡುವೆ ಸಿಲುಕಿರುವ ಭಾರತೀಯರನ್ನು ಕರೆತರಲು ಆಪರೇಷನ್ ಅಜಯ್ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಮೊದಲ ಹಂತದಲ್ಲಿ 230 ಮಂದಿ ಭಾರತೀಯರನ್ನ ಕರೆತರಲಾಗಿದ್ದು, ಈ ಪೈಕಿ ಐವರು ಕನ್ನಡಿಗರೂ ಇದ್ದಾರೆ. ಅವರಿಂದು ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಯುದ್ಧಭೂಮಿಯ ಅನುಭವ ಬಿಚ್ಚಿಟ್ಟಿದ್ದಾರೆ- ಕಳೆದ 9 ತಿಂಗಳಿನಿಂದ ಇಸ್ರೇಲ್ನಲ್ಲಿ ಕೆಲಸ ಮಾಡಿಕೊಂಡಿರುವ ಮಹಾರಾಷ್ಟ್ರ ಮೂಲದ ಯುವತಿ ಪ್ರಿಯಾಂಕಾ ʻ ಮಾತನಾಡಿ, ಯುದ್ಧಭೂಮಿಯ ಅನುಭವ ಹಂಚಿಕೊಂಡಿದ್ದಾರೆ. ನಾನು ಇದ್ದ ಅಷ್ಟೂ ದಿನಗಳಲ್ಲಿ ಇದೇ ಮೊದಲ ಬಾರಿಗೆ ದೊಡ್ಡಮಟ್ಟದ ಸಮಸ್ಯೆ ಆಗಿರೋದು. ನಾವು ಇಸ್ರೇಲ್ ಕೇಂದ್ರ ಭಾಗದಲ್ಲಿದ್ದೆವು. ದಕ್ಷಿಣಕ್ಕೆ 120 ಕಿಮೀ ದೂರದಲ್ಲಿದ್ದ ಗಾಜಾಪಟ್ಟಿಯಲ್ಲಿ ದಾಳಿ ನಡೆದಿತ್ತು. ಇದರಿಂದ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದೆವು ನಾವು ಬಂಕರ್ಗಳಲ್ಲಿ ಅಡಗಿ ಕೂರಬೇಕಿತ್ತು. ದಿನಕ್ಕೆ ಎರಡು ಬಾರಿ ಸೈರನ್ ಮಾಡುತ್ತಿದ್ದರು. ಆಗ 9 ನಿಮಿಗಳಷ್ಟೇ ಕಾಲಾವಕಾಶ ಸಿಗುತ್ತಿತ್ತು. ಅಷ್ಟರಲ್ಲೇ ನಾವು ಮತ್ತೊಂದು ಬಂಕರ್ ಸೇರಿಕೊಳ್ಳಬೇಕಿತ್ತು. ದಿನಕ್ಕೆ ಎರಡು ಬಾರಿ ಮಾತ್ರ ಸೈರನ್ ಆಗುತ್ತಿತ್ತು. ಕೆಲವೊಮ್ಮೆ ದಿನಕ್ಕೆ ಒಂದು ಬಾರಿ ಮಾತ್ರ ಆಗುತ್ತಿತ್ತು. ಬಂಕರ್ನಿಂದ ಆಚೆ ಬಂದಾಗ ರಾಕೆಟ್, ಗುಂಡಿನ ಶಬ್ಧ ಕಿವಿಗೆ ಅಪ್ಪಳಿಸುತ್ತಿತ್ತು, ಪರಿಸ್ಥಿತಿ ಸೂಕ್ಷ್ಮವಾಗಿ ಇದ್ದುದರಿಂದ ನಾವು ನೋಡಲು ಸಾಧ್ಯವಾಗಲಿಲ್ಲ. ಆದ್ರೆ ನಾವು ಬಂಕರ್ ನಿಂದ ಮತ್ತೊಂದು ಬಂಕರ್ಗೆ ತೆರಳುತ್ತಿದ್ದ ವೇಳೆ ಅನೇಕ ಇಸ್ರೇಲಿಯನ್ನರು ನನಗೆ ಸಹಾಯ ಮಾಡಿದರು, ಸೇಫ್ ಆಗಿ ಹೋಗಿ ಅಂತಾ ಹೇಳಿದರು. ಅವರ ಹೆಸರೂ ಕೂಡ ನನಗೆ ಗೊತ್ತಾಗಲಿಲ್ಲ.ಭಾರತಕ್ಕೆ ಬಂದ ನಂತರ ಆತಂಕವೆಲ್ಲಾ ದೂರವಾಯಿತು. ನಮ್ಮನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಸೇರಿಸಿದ್ದಕ್ಕೆ ಭಾರತ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇವೆ. ಶೀಘ್ರದಲ್ಲೇ ಇಸ್ರೇಲ್ ಪರಿಸ್ಥಿತಿಯನ್ನು ನಿಯಂತ್ರಿಸಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.