ಇಂದು ಮಧ್ಯಾಹ್ನ ಹವಾಮಾನ ವೈಪರಿತ್ಯದಿಂದಾಗಿ ರಸ್ತೆ ಮೂಲಕ ಕೋಲ್ಕತ್ತಾಗೆ ಹಿಂತಿರುಗುತ್ತಿದ್ದಾಗ ಬುರ್ದ್ವಾನ್ನಲ್ಲಿ ಆಡಳಿತಾತ್ಮಕ ಸಭೆಯಿಂದ ಹೊರಟಿದ್ದ ಸಂದರ್ಭ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಬೆಂಗಾವಲು ವಾಹನದ ಎದುರು ಏಕಾಏಕಿ ಕಾರೊಂದು ಬಂದ ಪರಿಣಾಮ ಚಾಲಕ ಹಠಾತ್ ಬ್ರೇಕ್ ಹಾಕಿದ್ದು, ಕಾರಿನ ಹಿಂಬದಿ ಕುಳಿತಿದ್ದ ಮಮತಾ ಬ್ಯಾನರ್ಜಿ ಅವರ ಹಣೆ ಮತ್ತು ತೋಳಿನ ಮೇಲೆ ಸಣ್ಣ ಗಾಯವಾಗಿದೆ.ಕಳೆದ ವರ್ಷ ಜೂನ್ನಲ್ಲಿ ಸಿಲಿಗುರಿಯ ಸೆವೋಕ್ ಏರ್ ಬೇಸ್ನಲ್ಲಿ ತನ್ನ ಹೆಲಿಕಾಪ್ಟರ್ನ ತುರ್ತು ಲ್ಯಾಂಡಿಂಗ್ ಸಂದರ್ಭದಲ್ಲಿ ಉಂಟಾದ ಗಾಯದ ನಂತರ ಬ್ಯಾನರ್ಜಿ ಪ್ರಸ್ತುತ ಅವರ ಎಡ ಮೊಣಕಾಲಿನ ಮೇಲೆ ಚಿಕಿತ್ಸೆ ಪಡೆಯುತ್ತಿದ್ದಾರೆ.