ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಂದು ದೇಶ ತನ್ನ ನೆಲದ ಶ್ರೇಷ್ಠ ನಾಗರೀಕ ಪ್ರಶಸ್ತಿ ನೀಡಿ ಗೌರವಿಸಿದೆ. ಎರಡು ದಿನಗಳ ಕಾಲ ಭೂತಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಆರ್ಡರ್ ಆಫ್ ಡ್ರುಕ್ ಗ್ಯಾಲ್ಪೋ ಗೌರವ ನೀಡಲಾಗಿದೆ.ಫ್ರಾನ್ಸ್, ಅಮೆರಿಕ, ಇಂಗ್ಲೆಂಡ್, ಯುಎಇ, ಸೌದಿ ಅರೇಬಿಯಾ ಸೇರಿದಂತೆ ವಿಶ್ವದ ಪ್ರಮುಖ ದೇಶಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ದೇಶದ ಶ್ರೇಷ್ಠ ನಾಗರೀಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಸಾಲಿಗೆ ಈಗ ಭಾರತದ ನೆರೆಯ ದೇಶ ಭೂತಾನ್ ಕೂಡ ಸೇರಿಕೊಂಡಿದೆ. ಪಿಎಂ ಮೋದಿ ಅವರು ಭೂತಾನ್ನ ಅತ್ಯುನ್ನತ ನಾಗರಿಕ ಗೌರವವನ್ನು ಪಡೆದ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಭೂತಾನ್ನ ರಾಜ ಶುಕ್ರವಾರ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭೂತಾನ್ನ ಸರ್ವಶ್ರೇಷ್ಠ ನಾಗರೀಕ ಪುರಸ್ಕಾರವಾದ ಆರ್ಡರ್ ಆಫ್ ಡ್ರುಕ್ ಗ್ಯಾಲ್ಪೋ ಪ್ರದಾನ ಮಾಡಿದ್ದಾರೆ. ಪ್ರಶಸ್ತಿ ಸ್ಥಾಪಿತವಾದ ಪ್ರಾಶಸ್ತ್ಯದ ಪ್ರಕಾರ, ಆರ್ಡರ್ ಆಫ್ ದ ಡ್ರುಕ್ ಗ್ಯಾಲ್ಪೋ ಅನ್ನು ಜೀವಮಾನದ ಸಾಧನೆ ಸಮಾರ್ಥವಾಗಿ ನೀಡಲಾಗುತ್ತಿತ್ತು. ಭೂತಾನ್ನ ಸರ್ವಶ್ರೇಷ್ಠ ಪ್ರಜೆಗೆ ಈ ಗೌರವವನ್ನು ನೀಡಲಾಗುತ್ತದೆ. ಇದು ಭೂತಾನ್ನ ಎಲ್ಲಾ ಆರ್ಡರ್ಗಳು, ಗೌರವಗಳು ಹಾಗೂ ಪದಕಗಳಿಂದ ಉಚ್ಛ ಸ್ಥಾನದಲ್ಲಿ ನಿಲ್ಲುತ್ತದೆ. ಇಲ್ಲಿಯವರೆಗೂ ಈ ಪ್ರಶಸ್ತಿಯನ್ನು ಕೇವಲ ನಾಲ್ಕು ಗಣ್ಯ ವ್ಯಕ್ತಿಗಳಿಗೆ ಮಾತ್ರ ನೀಡಲಾಗಿದೆ. ಭೂತಾನ್ನ ಅತ್ಯುನ್ನತ ನಾಗರಿಕ ಗೌರವವನ್ನು ಪಡೆದ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥ ಪ್ರಧಾನಿ ಮೋದಿ ಎನಿಸಿಕೊಂಡಿದೆ.