ಐಟಿ ದಾಳಿ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಇಲ್ಲದೆ ಐಟಿ ದಾಳಿ ಇರಲ್ಲ. ರಾಜಕೀಯ ಲಿಂಕ್ ಇರುತ್ತೆ. ಛತ್ತೀಸಗಢ್ ದಲ್ಲೂ ದಾಳಿ ಆಗಿದೆ. ಐಟಿ ದಾಳಿಯಲ್ಲಿ ಸಿಕ್ಕ ಹಣ ಪಂಚ ರಾಜ್ಯಗಳ ಫಂಡಿಂಗ್ಗೆ ಸಂಗ್ರಹ ಎಂಬ ಬಿಜೆಪಿ ಆರೋಪ ವಿಚಾರ ಪ್ರತಿಕ್ರಿಯಿಸಿ, ಅವರಿಗೆಲ್ಲ ರಿಯಾಕ್ಟ್ ಮಾಡಲ್ಲ. ಬೆಂಗಳೂರಿನ ಐಟಿ ದಾಳಿ ಬಗ್ಗೆ ನನಗೆ ಮಾಹಿತಿ ಗೊತ್ತಿಲ್ಲ. ಏನ್ ಆಗಿದೆ ಅಂತಾನೂ ಗೊತ್ತಿಲ್ಲ, ನನಗೆ ಯಾರೂ ಮಾಹಿತಿ ಕೊಟ್ಟಿಲ್ಲ. ರಾಜಕೀಯ ಇಲ್ಲದೆ ಇವೆಲ್ಲ ಆಗ್ತಾವಾ ಬಿಜೆಪಿ ಅಧಿಕಾರ ಇರುವ ರಾಜ್ಯಗಳಲ್ಲಿ ಐಟಿ ದಾಳಿ ಆಗಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಗುತ್ತಿಗೆದಾರರ ಬಿಲ್ ಬಾಕಿ ಬಗ್ಗೆ ಕೆಂಪಣ್ಣ ಸುದ್ದಿಗೋಷ್ಟಿ ಸಂಬಂಧ ಮಾತನಾಡಿ, ಕೆಂಪಣ್ಣ ಅವರು ಗಾಬರಿ ಆಗೋದು ಬೇಡ. ತನಿಖೆ ನಡೆಯುತ್ತಿದ್ದರೂ ಕೂಡ 70% ಬಿಲ್ ಕ್ಲಿಯರ್ ಮಾಡಿದ್ದೀವಿ. ಕೆಂಪಣ್ಣ ಅವರಿಗೆ ಏನಾದರೂ ಸಮಸ್ಯೆ ಇದ್ರೆ ಬಂದು ಮಾತಾಡಲಿ ಎಂದರು.