ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯಕೀಯ, ಹೋಂ, ಡಿಸಿಎಂ, ಸಿಎಸ್, ಹಣಕಾಸು, ತಜ್ಞರ ಸಮಿತಿ ಜೊತೆಗಿನ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ . ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ. ಮೂವರು ಕೊರೊನಾದಿಂದ ಮೃತರಾಗಿದ್ದಾರೆ. ಆದರೆ ಅವರು ಕೋವಿಡ್ ನಿಂದಲೇ ಸತ್ತಿದ್ದಾರೆ ಅನ್ನೋಕೆ ಆಗಲ್ಲ. ಅವರಿಗೆ ಬೇರೆ ಬೇರೆ ಸಮಸ್ಯೆ ಇತ್ತು. ಅವರಿಗೆ ಕೋವಿಡ್ ಪಾಸಿಟಿವ್ ಇತ್ತು. ಆರೋಗ್ಯ ಸಚಿವರು ಈಗಾಗಲೇ ಸಭೆ ಮಾಡಿದ್ದಾರೆ.ಇಂದು ತಜ್ಞರ ಸಲಹೆಗಳನ್ನು ಪಡೆದಿದ್ದೇವೆ. ಈ ಹಿಂದೆ ಮಾಡಿದ ತಪ್ಪು ಮರುಕಳಿಸಬಾರದು ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಹೇಳಿದ್ದೇನೆ. ಆಕ್ಸಿಜನ್, ಬೆಡ್, ಔಷಧಿ ಯಾವುದೂ ಕೊರತೆ ಆಗಬಾರದು. ಬೇರೆ ಕಾಯಿಲೆಇರೋರಿಗೂ ಚಿಕಿತ್ಸೆ ಕೊಡಲು ಸೂಚನೆ ನೀಡಲಾಗಿದೆ. ಯಾವುದೇ ಕೊರತೆ ಆಗದಂತೆ ಸೂಚನೆ ನೀಡಿದ್ದೇನೆ. ಲಸಿಕೆ ಅಭಿಯಾನ ಕೂಡಾ ಅಗತ್ಯವಿದ್ದರೆ ಶುರು ಮಾಡಲು ತಿಳಿಸಿದ್ದೇನೆ. ಯಾರು ತೆಗೆದುಕೊಂಡಿಲ್ಲ ಅವರು ಲಸಿಕೆ ಪಡೆಯಬೇಕು.ಈಗ ಬಂದಿರುವುದು JN.1 ಓಮ್ರಿಕಾನ್ ಉಪತಳಿಯಾಗಿದೆ. ಕರ್ನಾಟಕದಲ್ಲಿ 92 ಜನ ಪಾಸಿಟಿವ್ ಇದೆ ಅಂತ ಮಾಹಿತಿ ಇದೆ. ಇದರಲ್ಲಿ ಬೆಂಗಳೂರಿನಲ್ಲಿ 80, ಮೈಸೂರು 5, ಬಳ್ಳಾರಿ 3, ರಾಮನಗರ ಹಾಗೂ ಮಂಡ್ಯದಲ್ಲಿ ತಲಾ 1 ಕೇಸ್ ಇದೆ. 72 ರೋಗಿಗಳಿಗೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 20 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 7 ಮಂದಿ ಐಸಿಯುನಲ್ಲಿ ಇದ್ದಾರೆ.ಶನಿವಾರದಿಂದ ಪ್ರತಿದಿನ 5 ಸಾವಿರ ಟೆಸ್ಟ್ ಪ್ರಾರಂಭ ಮಾಡ್ತೀವಿ. ಕ್ಯಾಬಿನೆಟ್ ಸಬ್ ಕಮಿಟಿ ರಚನೆ ಮಾಡ್ತೀವಿ. ಯಾರು ಹೆಡ್ ಅಂತ ಕ್ಯಾಬಿನೆಟ್ ನಲ್ಲಿ ನಿರ್ಧಾರ ಮಾಡ್ತೀವಿ. ಕ್ಯಾಬಿನೆಟ್ ಸಬ್ ಕಮಿಟಿ ನಿರಂತರವಾಗಿ ಕೆಲಸ ಮಾಡಬೇಕು. 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು ಎಂದರು.