ಡಿಕೆಶಿ ಖಜಾನೆ ವೃದ್ಧಿಗೆ ಇದನ್ನ ಮಾಡ್ತಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಗಳಿಗೆ ನಾವು ಉತ್ತರ ಕೊಡೋದು ಸೂಕ್ತವಲ್ಲ. ಕುಮಾರಸ್ವಾಮಿ ಇತ್ತೀಚಿನ ದಿನಗಳಲ್ಲಿ ಬಾಲಿಶವಾದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಕುಮಾರಸ್ವಾಮಿ ಹೇಳಿಕೆಯಲ್ಲಿ ಹತಾಶೆ ಮನೋಭಾವ ಕಾಣುತ್ತಿದೆ. ಅವರಿಗೆ ಡಿಕೆ ಶಿವಕುಮಾರ್ ಡಿಸಿಎಂ ಆಗಿರೋದು, ನಾವು ಒಕ್ಕಲಿಗರು ಶಾಸಕರಾಗಿರೋದನ್ನು ಅರಗಿಸಿಕೊಳ್ಳಲು ಆಗ್ತಿಲ್ಲ. ಹೀಗಾಗಿ ಬೇರೆ ಬೇರೆ ರೀತಿ ವಾಖ್ಯಾನ ಮಾಡ್ತಾರೆ. ಕುಮಾರಸ್ವಾಮಿ ಏನೇನೋ ಅರ್ಥವಿಲ್ಲದಂತೆ ಮಾತಾಡ್ತಾರೆ. ಯಾರ ಜಮೀನು ಮೌಲ್ಯ ವೃದ್ಧಿ ಮಾಡಿಕೊಳ್ತಾರೆ. ಕುಮಾರಸ್ವಾಮಿ ಜಮೀನು ಇಲ್ಲವಾ.. ಕುಮಾರಸ್ವಾಮಿ ಕುಟುಂಬ ಏನು ಸತ್ಯ ಹರಿಶ್ಚಂದ್ರ ಕುಟುಂಬನಾ. ಸರ್ಕಾರದ ಒಂದು ರೂಪಾಯಿ ದುಡ್ಡನ್ನ ನಾನು ಮತ್ತು ನನ್ನ ಕುಟುಂಬ ಬಳಸಿಕೊಂಡಿಲ್ಲ ಅಂತ ಕುಮಾರಸ್ವಾಮಿ ಧರ್ಮಸ್ಥಳದ ಮುಂದೆ ಬಂದು ಪ್ರಮಾಣ ಮಾಡಲಿ.ಪೊಲೀಸರ ವರ್ಗಾವಣೆಯನ್ನು ಬಿಟ್ಟಿಲ್ಲ. ಪೊಲೀಸರ ವರ್ಗಾವಣೆಯಲ್ಲೂ ಅವರ ಕುಟುಂಬ ದುಡ್ಡು ತೆಗೆದುಕೊಂಡಿದೆ. ಎಲ್ಲರೂ ಗಾಜಿನ ಮನೆಯಲ್ಲಿ ಇರೋದು. ಯಾರು ಕೂಡ ಸತ್ಯ ಹರಿಶ್ಚಂದ್ರರು ಇಲ್ಲ. ಅವಕಾಶ ಸಿಗದೇ ಇರೋನು ಸತ್ಯ ಹರಿಶ್ಚಂದ್ರ ಅಷ್ಟೆ. ಅವಕಾಶ ಸಿಕ್ಕಾಗ ಎಲ್ಲರೂ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಅವರದ್ದೇ ಆದ ಬ್ಯುಸಿನೆಸ್ ಇದೆ. ವ್ಯವಹಾರ, ವಹಿವಾಟು ಇದೆ. ಇಲಾಖೆಗಳನ್ನು ಮ್ಯಾನೇಜ್ ಮಾಡಿದ್ದಾರೆ. ಡಿಕೆ ಶಿವಕುಮಾರ್ ಇದ್ದ ಯಾವ ಇಲಾಖೆಯಲ್ಲಿ ಕೆಟ್ಟ ಹೆಸರು ಬಂದಿದೆ. ಇಂಧನ ಇಲಾಖೆಯನ್ನ ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ ಮೋದಿ ಕರೆದು ಅವರಿಗೆ ಸನ್ಮಾನ ಮಾಡಿದ್ದಾರೆ. ಕುಮಾರಸ್ವಾಮಿ ಇಂತಹ ಚಿಲ್ಲರೆ ಹೇಳಿಕೆಗಳನ್ನ ಬಿಡಬೇಕು. ಎಂದು ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ ಸವಾಲೆಸೆದಿದ್ದಾರೆ.