ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ ವತಿಯಿಂದ ಜಯನಗರದಲ್ಲಿ ಆಯೋಜಿಸಿದ್ದ ಜನೌಷಧಿ ದಿವಸ್‌ಆಚರಣೆ ಮತ್ತು 100ನೇ ಜನೌಷಧಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಗರದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು, ಪ್ರತಿ ವಾರ್ಡಿಗೆ ನಮ್ಮ ಕ್ಲಿನಿಕ್‌ಪ್ರಾರಂಭಿಸಲಾಗುತ್ತಿದ್ದು, ಈಗಾಗಲೇ 108 ಕಾರ್ಯಾರಂಭಗೊಂಡಿವೆ. ಇನ್ನೂ ನೂರು ಕ್ಲಿನಿಕ್‌ಇದೇ ವಾರದಲ್ಲಿ ಪ್ರಾರಂಭಿಸಲಾಗುತ್ತಿದೆ. 19 ಪಿಎಚ್‌ಸಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. 4 ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಎಲ್ಲೆಡೆ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೇಳಿದರು.ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ಮಾಂಡವಿಯಾ ಮಾತನಾಡಿ, ಜನೌಷಧಿ ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲದೇ ಖಾಸಗಿ ಮೆಡಿಕಲ್‌ನಲ್ಲೂ ತೆರೆಯಲು ಮುಕ್ತವಾದ ಅವಕಾಶವನ್ನು ನೀಡಲಾಗಿದೆ. ಮೊದಲು ಅರ್ಜಿ ಸಲ್ಲಿಸಿ ನಂತರ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗುವುದು. ಸರ್ಕಾರದಿಂದ ಜನೌಷಧಿ ಕೇಂದ್ರ ಆರಂಭಿಸುವವರಿಗೆ ರಿಯಾಯಿತಿಯನ್ನೂ ಸಹ ನೀಡಲಾಗುತ್ತಿದೆ. ದೇಶದಲ್ಲಿ ಈವರೆಗೆ 9 ಸಾವಿರ ಜನೌಷಧಿ ಕೇಂದ್ರ ತೆರೆ ಯಲಾಗಿದೆ. ಅದನ್ನು ಇನಷ್ಟು ಜನರಿಗೆ ತಿಳಿಸುವಂತಹ ಕೆಲಸವನ್ನು ಮಾಡಬೇಕು ಎಂದು ಹೇಳಿದರು.