ಸಾತನೂರಿನ ಆಕಾಶ್ ಫಾರಂ ನಿಂದ ತೆರಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಬಹುತೇಕ ಶಾಸಕರು ನನಗೆ ಸೀಕ್ರೆಟ್ ವೋಟ್ ಮಾಡಿದ್ದಾರೆ ಅನ್ನೊ ಸಿದ್ದರಾಮಯ್ಯ ಹೇಳಿಕೆಗೆ ಠಕ್ಕರ್ ನೀಡಿದರು. ಸಂತೋಷ ಯಾರು ಏನಾದ್ರು ಹೇಳಲಿ. ನನ್ನ ಬಳಿ ಯಾವ ಯಾವ ಶಾಸಕರಿಲ್ಲ. 135 ಶಾಸಕರು ನಮ್ಮವರೇ, ನಾನು ಸೇರಿದಂತೆ ಹೈಕಮಾಂಡ್ ಪಾದಕ್ಕೆ ಹಾಕಿದ್ದೀವಿ. ಎಲ್ಲರೂ ಆಸೆ ಪಡ್ಲಿ. ನಾವು ಒಂದು ಲೈನ್ನಿರ್ಣಯ ಮಾಡಿದ್ದೇವೆ. ನನ್ನ ಜೊತೆಗೆ 135 ಶಾಸಕರು ಇದ್ದಾರೆ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ 135 ಶಾಸಕರನ್ನ ಸೋನಿಯಾ ಗಾಂಧಿಗೆ ಅರ್ಪಿಸಿದ್ದೇನೆ. ನನ್ನ ಹತ್ರ ಯಾರು ಇಲ್ಲ, ಕಾಂಗ್ರೆಸ್ ಪಾರ್ಟಿಯಲ್ಲಿ 135 ಜನ ಇದ್ದಾರೆ. ನನ್ನ ಸೇರಿಸಿ 135 ಶಾಸಕರು ಕಾಂಗ್ರೆಸ್ ನಲ್ಲಿ ಇದ್ದಾರೆ ಎಂದು ಹೇಳಿದರು.