136 ಸ್ಥಾನ ಬರುತ್ತೆ ಎಂದಿದ್ದಕ್ಕೆ ಆಗ ನನ್ನನ್ನು ಬಹಳಷ್ಟು ಜನ ನನ್ನನ್ನು ಮೆಂಟಲ್ಎಂದಿದ್ರು: ಡಿಕೆಶಿ

ಕೆಪಿಸಿಸಿ ಕಚೇರಿಯಲ್ಲಿ ಕ್ವಿಟ್ಇಂಡಿಯಾ ಚಳುವಳಿ 82ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಕೆಲವರು ನಾವೇ ಸರ್ಕಾರ ಮಾಡುತ್ತೇವೆ ಎಂದು ಹೇಳಿ ಕೆಲವರ ಕಾಲಿಗೆ ಬಿದ್ದಿದ್ದರು. ಅವರ ಹೆಸರು ಹೇಳುವುದಕ್ಕೆ ನಾನು ಇಷ್ಟಪಡುವುದಿಲ್ಲ. ಸಮ್ಮಿಶ್ರ ಸರ್ಕಾರ ಮಾಡುತ್ತೇವೆ ಎಂದು ಬರೆದುಕೊಂಡಿದ್ದರು. ಆದರೆ ನಾನು ಮಾತ್ರ 136ಕ್ಕೆ ಸ್ಟಿಕ್ಆಗಿದ್ದೆ ಸರ್ಕಾರ ಬರುವ ಸಂದರ್ಭದಲ್ಲಿ 136 ಸ್ಥಾನ ಬರುತ್ತದೆ ಎಂದಿದ್ದೆ. ಆಗ ನನ್ನನ್ನು ಬಹಳಷ್ಟು ಜನ ಮೆಂಟಲ್ಆಗಿದ್ದಾನೆ ಎಂದು ಲೇವಡಿ ಮಾಡಿದ್ದರು. ಸೋನಿಯಾ ಗಾಂಧಿ ಅವರು ಇಷ್ಟು ಸೀಟ್ಹೇಗೆ ಬರುತ್ತದೆ ಎಂದು ಕೇಳಿದ್ದರು. ನಾನೇ ಹೊಲ ಉತ್ತು, ಗೊಬ್ಬರ ಹಾಕಿದ್ದೇನೆ. ಈ ಕಾರಣದಿಂದ ನನಗೆ ಗೊತ್ತು ಎಂದು ಉತ್ತರಿಸಿದ್ದೆ. ಕೆಲವು ಸೀಟು ಹಂಚಿಕೆಯಲ್ಲಿ ನಾವೂ ಸ್ವಲ್ಪ ತಪ್ಪು ಮಾಡಿದೆವು. 224ರ ಪೈಕಿ 215 ಸೀಟು ಹಂಚಿಕೆ ಒಮ್ಮತದ ಪ್ರಕಾರ ಒಗ್ಗಟ್ಟಿನಲ್ಲೇ ಆಗಿದೆ. ಪಕ್ಷಕ್ಕೋಸ್ಕರ ಹಲವು ಹಿರಿಯರು ಟಿಕೆಟ್ತ್ಯಾಗ ಮಾಡಿದ್ದಾರೆ. ಮಾಟ ಮಂತ್ರ ಮಾಡಿ ಸರ್ಕಾರ ಮಾಡಿದ್ದೇವೆ ಎಂದು ವಿಪಕ್ಷ ನಾಯಕರೊಬ್ಬರು ಮಾತನಾಡಿದ್ದಾರೆ. ಅವರ ಹೆಸರು ಹೇಳಲು ಇಷ್ಟ ಪಡುವುದಿಲ್ಲ ಎಂದು ಹೇಳಿ ಪರೋಕ್ಷವಾಗಿ ಕುಮಾರಸ್ವಾಮಿ ಅವರಿಗೆ ಟಾಂಗ್ಕೊಟ್ಟರು.ಕಾಂಗ್ರೆಸ್ ಮುಕ್ತ ಭಾರತ ಅಂತ ಅವರು ಹೇಳುತ್ತಿದ್ದರು. ನಾವು ಈಗ ಬಿಜೆಪಿ ಮುಕ್ತ ಭಾರತ ಮಾಡಬೇಕಾಗಿದೆ ಬಿಜೆಪಿ ಭಾರತದಿಂದ ಬಿಟ್ಟು ತೊಲಗಲಿ ಅಂತ ಕಾರ್ಯಕ್ರಮ ಮಾಡಬೇಕು. ಎಂದು ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *