1,950 ಕೋಟಿ ವೆಚ್ಚದ ಕೊಚ್ಚಿ ಮೆಟ್ರೋ ರೈಲು ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕೊಚ್ಚಿ ಮೆಟ್ರೋ ರೈಲು ಯೋಜನೆಯ ಮೊದಲ ಹಂತದ ವಿಸ್ತರಣೆಯನ್ನು ಉದ್ಘಾಟಿಸಲಿದ್ದಾರೆ. ಇದನ್ನು ಪೆಟ್ಟಾದಿಂದ ಎಸ್‌ಎನ್ ಜಂಕ್ಷನ್‌ವರೆಗೆ ನಿರ್ಮಿಸಲಾಗಿದೆ. ಈ ವಿಸ್ತರಣೆಗಾಗಿ ಈವರೆಗೂ 700 ಕೋಟಿಗೂ ಹೆಚ್ಚು ವೆಚ್ಚವಾಗಿದೆ. ಇದರ ಉದ್ದ 11.2 ಕಿಲೋಮೀಟರ್. ಇದು 11 ನಿಲ್ದಾಣಗಳನ್ನು ಒಳಗೊಂಡಿದೆ. ಈ ಯೋಜನೆಯ ಒಟ್ಟು ಅಂದಾಜು ವೆಚ್ಚ ಸುಮಾರು 1,950 ಕೋಟಿ ರೂಪಾಯಿ ಆಗಿದೆ. ಕೊಚ್ಚಿ ಮೆಟ್ರೋ ರೈಲು ಯೋಜನೆಯ ಸುಮಾರು 55% ನಷ್ಟು ಶಕ್ತಿಯ ಅಗತ್ಯಗಳನ್ನು ಸೌರಶಕ್ತಿಯಿಂದ ಪೂರೈಸಲಾಗುತ್ತದೆ. ಜೆಎಲ್‌ಎನ್ ಸ್ಟೇಡಿಯಂನಿಂದ ಇನ್ಫೋಪಾರ್ಕ್‌ವರೆಗೆ ಎರಡನೇ ಹಂತದ ಕೊಚ್ಚಿ ಮೆಟ್ರೋ ರೈಲು ಯೋಜನೆಗೆ ಪ್ರಧಾನಿ ಇದೇ ವೇಳೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

Leave a Reply

Your email address will not be published. Required fields are marked *