ಕಳೆದ ವರ್ಷ ನವೆಂಬರ್‌ನಲ್ಲಿ ಕೋವಿಡ್‌ನಿರ್ಬಂಧಗಳನ್ನು ತೆಗೆದ ಬಳಿಕ ಸುಮಾರು 20 ಕೋಟಿ ಜನರಿಗೆ ಕೋವಿಡ್‌ಸೋಂಕು ಕಾಣಿಸಿಕೊಂಡಿತ್ತು ಎಂದು ಮೊದಲ ಬಾರಿಗೆ ಚೀನಾ ಸರ್ಕಾರವೇ ಅಧಿಕೃತವಾಗಿ ಒಪ್ಪಿಕೊಂಡಿದೆ. ಇವರೆಲ್ಲರಿಗೂ ಚಿಕಿತ್ಸೆ ನೀಡಲಾಗಿದ್ದು, ಗುಣಮುಖರಾಗಿದ್ದಾರೆ, ಈ ಮೂಲಕ ಕೋವಿಡ್‌ವಿರುದ್ಧ ಹೋರಾಟದಲ್ಲಿ ಚೀನಾ ಜಯಗಳಿಸಿದೆ ಎಂದು ಹೇಳಿದೆ. ಆದರೆ ಸಾವಿನ ಕುರಿತಾಗಿ ಯಾವುದೇ ಮಾಹಿತಿ ನೀಡಿಲ್ಲ.ಆದರೆ ಕಳೆದ ವರ್ಷ ನವೆಂಬರ್‌ಮತ್ತು ಡಿಸೆಂಬರ್‌ನಲ್ಲಿ ಕೋವಿಡ್‌ನಿರ್ಬಂಧಗಳನ್ನು ಹಠಾತ್ತನೆ ತೆಗೆದ ಕಾರಣ ಅಲ್ಪಾವಧಿಯಲ್ಲಿ ಕೋವಿಡ್‌ಸ್ಪೋಟಗೊಂಡಿತ್ತು. ಹಾಗಾಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು. ಆದರೆ ಅದನ್ನು ಇದೀಗ ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಹೇಳಿದ್ದಾರೆ.ಚೀನಾ ಇದೀಗ ಸಾಂಕ್ರಾಮಿಕದ ನಂತರದ ಹಂತಕ್ಕೆ ತಲುಪಿದ್ದು, ಇದು ಅಸಾಮಾನ್ಯ ಸಾಧನೆಯಾಗಿದೆ. ಸರ್ಕಾರ ಇನ್ನೂ ಮುಂದೆ ಸಹ ಸೋಂಕು ನಿರ್ಬಂಧ ಮತ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಏಜೆನ್ಸಿ ತಿಳಿಸಿದೆ. ಕೋವಿಡ್‌ಸಾಂಕ್ರಾಮಿಕದ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿದ್ದ ಸರ್ಕಾರ ಕಠಿಣ ನಿರ್ಬಂಧಗಳನ್ನು ವಿಧಿಸಿತ್ತು. ಆದರೆ ಇದನ್ನು ವಿರೋಧಿಸಿ ಜನರು ಬೃಹತ್‌ಪ್ರತಿಭನಟನೆಗಳನ್ನು ನಡೆಸಿದ ಬಳಿಕ ನಿರ್ಬಂಧಗಳನ್ನು ತೆಗೆದುಹಾಕಿತ್ತು.