ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಡವರು ಯಾರು 200 ಯುನಿಟ್ ಒಳಗೆ ಬಳಸುತ್ತಾರೆ, ಅವರಿಗೆ ಉಚಿತ ವಿದ್ಯುತ್ ಕೊಡ್ತೀವಿ. ಬಿಲ್ ಕಟ್ಟೋ ಹಾಗೆ ಇಲ್ಲ. ಬಾಡಿಗೆದಾರರಿಗೂ ಇದು ಅನ್ವಯ ಆಗುತ್ತೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಾಪ ಅವರಿಗೆ ಏನೂ ಇಲ್ಲ ಅದಕ್ಕೆ ಪ್ರತಿಭಟನೆ ಮಾಡ್ತಿದ್ದಾರೆ. ಬಿಜೆಪಿ ಅವರಿಗೆ ಯಾವ ನೈತಿಕತೆ ಇದೆ ಪ್ರತಿಭಟನೆ ಮಾಡೋಕೆ?. ಬಿಜೆಪಿ ಅವರು 10 ಗಂಟೆ ವಿದ್ಯುತ್ ಕೊಡ್ತೀವಿ ಅಂದ್ರು ಕೊಟ್ರಾ?, ಸಾಲಮನ್ನಾ ಮಾಡ್ತೀವಿ ಅಂದ್ರು ಮಾಡಿದ್ರಾ?, ನೀರಾವರಿಗೆ 1.5 ಲಕ್ಷ ಕೋಟಿ ಖರ್ಚು ಮಾಡ್ತೀನಿ ಅಂದ್ರು ಮಾಡಿದ್ರಾ?, ಹೀಗಿರುವಾಗ ನಮ್ಮನ್ನ ಪ್ರಶ್ನೆ ಮಾಡೋಕೆ ಇವರಿಗೆ ನೈತಿಕತೆ ಇದೆಯಾ ಬಿಜೆಪಿ ಅವರು ಹೇಳಿದ್ದು ಮಾಡಲಿಲ್ಲ. ನಾವು ಹೇಳಿದ್ದು ಮಾಡಿದ್ರು ಮೊಸರಲ್ಲಿ ಕಲ್ಲು ಹುಡುಕೋಕೆ ಹೊರಟಿದ್ದಾರೆ. ಹಿಂದೆ ನಾನು ಸಿಎಂ ಆಗಿದ್ದಾಗ ಕೊಟ್ಟಿದ್ದ 165 ಭರವಸೆ ಪೈಕಿ 158 ಭರವಸೆ ಈಡೇರಿಸಿದ್ದೇನೆ. ಇಂದಿರಾ ಕ್ಯಾಂಟಿನ್ ನಿಲ್ಲಿಸಿದ್ದು ಯಾರು? ಕೃಷಿ ಭಾಗ್ಯ ನಿಲ್ಲಿಸಿದ್ದು ಯಾರು? ಪಶು ಭಾಗ್ಯ, ಶೂ ಭಾಗ್ಯ ನಿಲ್ಲಿಸಿದ್ದು ಯಾರು? ಸೈಕಲ್ ನಿಲ್ಲಿಸಿದ್ದು ಯಾರು ಎಂದು ಎಂದು ಪ್ರಶ್ನಿಸಿದರು.