2000 ಎಕರೆಯಷ್ಟು ಎಲ್ಲ ಟಾಪ್ವಿಶ್ವವಿದ್ಯಾಲಯಗಳೂ ಇರುವಂತಹ ‘ನಾಲೆಡ್ಜ್ಸಿಟಿ’ ನಿರ್ಮಾಣ ಮಾಡುವುದು ನನ್ನ ಕನಸಾಗಿದೆ. : ಸಿಎಂ ಬೊಮ್ಮಾಯಿ

ನಗರದ ಸೆಂಟ್ರಲ್ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಬೆಂಗಳೂರು ನಗರ ವಿಶ್ವವಿದ್ಯಾಲಯದ ನವೀಕೃತ ಕ್ಯಾಂಪಸ್’ ಉದ್ಘಾಟಿಸಿಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರದ ಸಮೀಪ ಸುಮಾರು 2000 ಎಕರೆಯಷ್ಟು ಬೃಹತ್ಕ್ಯಾಂಪಸ್ನಲ್ಲಿ ರಾಜ್ಯ, ದೇಶ ಹಾಗೂ ಜಾಗತಿಕ ಮಟ್ಟದ ಎಲ್ಲ ಟಾಪ್ವಿಶ್ವವಿದ್ಯಾಲಯಗಳೂ ಇರುವಂತಹ ‘ನಾಲೆಡ್ಜ್ಸಿಟಿ’ ನಿರ್ಮಾಣ ಮಾಡುವುದು ನನ್ನ ಕನಸಾಗಿದೆ. ಹಾರ್ವರ್ಡ್, ಐಐಟಿ, ಎಂಐಟಿ ಸೇರಿದಂತೆ ರಾಜ್ಯ, ದೇಶ ಮಾತ್ರವಲ್ಲ ಇಡೀ ಪ್ರಪಂಚದ ಎಲ್ಲ ಟಾಪ್ವಿಶ್ವವಿದ್ಯಾಲಯಗಳನ್ನು ಈ ನಾಲೆಡ್ಜ್ಸಿಟಿಯೊಳಗೆ ತರುವ ಮೂಲಕ ಬೇರೆ ರಾಜ್ಯ, ವಿದೇಶಗಳಿಗೆ ಹೋಗಿ ವ್ಯಾಸಂಗ ಮಾಡಲಾಗದ ವಿದ್ಯಾರ್ಥಿಗಳಿಗೆ ರಾಜ್ಯದಲ್ಲೇ ಅವಕಾಶ ಮಾಡಿಕೊಡುವ ಮಹತ್ವಾಕಾಂಕ್ಷೆಯ ಆಲೋಚನೆ ಈ ಯೋಜನೆಯ ಹಿಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *