2020ರ ಅಧ್ಯಕ್ಷೀಯ ಚುನಾವಣಾ ಅಕ್ರಮ, ಜಾರ್ಜಿಯಾ ಕೋರ್ಟ್‌ಗೆ ಶರಣಾಗುತ್ತೇನೆಂದ ಡೋನಾಲ್ಡ್‌ಟ್ರಂಪ್‌

2020ರ ಅಧ್ಯಕ್ಷೀಯ ಚುನಾವಣೆ ವೇಳೆ ಜಾರ್ಜಿಯಾ ರಾಜ್ಯದ ಚುನಾವಣಾ ಫಲಿತಾಂಶವನ್ನು ತಿರುಚಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಗುರುವಾರ ಜಾರ್ಜಿಯಾ ಕೋರ್ಚ್‌ಗೆ ಶರಣಾಗುವುದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್‌ಟ್ರಂಪ್‌ಹೇಳಿದ್ದಾರೆ. ಬಂಧಕನಕ್ಕೊಳಪಡಲು ನಾನು ಗುರುವಾರ ಜಾರ್ಜಿಯಾದ ಅಂಟ್ಲಾಂಟಾಗೆ ಹೋಗುತ್ತಿದ್ದೇನೆ’ ಎಂದು ಟ್ರಂಪ್‌ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಕೋರ್ಚ್‌1.65 ಕೋಟಿ ರು. ಬಾಂಡ್‌ನಿಗದಿ ಪಡಿಸಿದೆ. ಏಪ್ರಿಲ್‌ನಿಂದ ಇಲ್ಲಿಯವರೆಗೆ ಟ್ರಂಪ್‌4ನೇ ಬಾರಿ ನ್ಯಾಯಾಲಯಕ್ಕೆ ಶರಣಾಗುತ್ತಿದ್ದಾರೆ. ಅಲ್ಲದೇ ಅಮೆರಿಕ ಅಧ್ಯಕ್ಷರಾಗಿ ಕ್ರಿಮಿನಲ್‌ಪ್ರಕರಣ ಎದುರಿಸುತ್ತಿರುವ ಮೊದಲಿಗ ಎಂಬ ಕುಖ್ಯಾತಿಗೂ ಟ್ರಂಪ್‌ಪಾತ್ರರಾಗಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ವಿರುದ್ಧ ಕುತಂತ್ರ ನಡೆಸಲಾಗಿದೆ ಎಂದು ತಮ್ಮ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದಲ್ಲದೇ, 2024ರ ಚುನಾವಣೆಗೆ ಪ್ರಚಾರವನ್ನೂ ಸಹ ಆರಂಭಿಸಿದ್ದಾರೆ. ಒಂದು ವೇಳೆ ಈ ಪ್ರಕರಣದಲ್ಲಿ ಟ್ರಂಪ್‌ಶಿಕ್ಷೆಗೊಳಪಟ್ಟರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ. ಟ್ರಂಪ್‌ಕೋರ್ಚ್‌ಗೆ ಹಾಜರಾಗುವ ಸಮಯದಲ್ಲಿ ಕೋರ್ಚ್‌ಆವರಣದಲ್ಲಿ ಲಾಕ್ಡೌನ್‌ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾರ್ಜಿಯಾದಲ್ಲಿ 2020ರ ಚುನಾವಣಾ ಫಲಿತಾಂಶಗಳನ್ನು ಬುಡಮೇಲು ಮಾಡಲು ಟ್ರಂಪ್‌ಪಿತೂರಿ ನಡೆಸಿದ್ದರು ಎಂದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *