2022ರಲ್ಲಿ ವಿಶ್ವದ ಇತರೆ ಯಾವುದೇ ದೇಶಕ್ಕಿಂತ ಭಾರತ ಸರ್ಕಾರ, ಆರ್ಥಿಕತೆಯನ್ನು ಅತ್ಯಂತ ಹೆಚ್ಚು ಸಮರ್ಥವಾಗಿ ನಿರ್ವಹಿಸಿದೆ

‘ಆ್ಯಕ್ಸಿಸ್‌ಮೈ ಇಂಡಿಯಾ’ ಕಳೆದ ತಿಂಗಳು ದೇಶದ 36 ರಾಜ್ಯ/ಕೇಂದ್ರಾಡಳಿತಗಳ 10019 ಜನರನ್ನು ಸಂದರ್ಶಿಸಿ ಸಮೀಕ್ಷೆ ನಡೆಸಿದ್ದು ಅದರಲ್ಲಿ ಶೇ.62ರಷ್ಟು ಜನರು, ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರ, ಆರ್ಥಿಕತೆಯನ್ನು ಇತರೆ ಯಾವುದೇ ದೇಶಗಳಿಗಿಂತ ಹೆಚ್ಚು ಸಮರ್ಥವಾಗಿ ನಿರ್ವಹಿಸಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಉಳಿದಂತೆ ಶೇ.29ರಷ್ಟು ಜನರು ಈ ವರ್ಷ ತಮಗೆ ಉತ್ತಮ ಉದ್ಯೋಗಾವಕಾಶದ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಶೇ.73ರಷ್ಟು ಜನರು ಕಳೆದ ವರ್ಷಕ್ಕಿಂತ ಈ ವರ್ಷ ಮನೆ ನಿರ್ವಹಣೆ ವೆಚ್ಚದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಶೇ.50ರಷ್ಟುಜನರು ಈ ಹೆಚ್ಚಳಕ್ಕೆ ಹಣದುಬ್ಬರವೇ ಕಾರಣ ಎಂದಿದ್ದಾರೆ. ಶೇ.41ರಷ್ಟುಜನರು ವೈಯಕ್ತಿಕ ಆರೈಕೆ ಉತ್ಪನ್ನಗಳ ಬಳಕೆಯಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಎ.ಸಿ., ಕಾರು, ಫ್ರಿಜ್‌ಮೊದಲಾದ ವಸ್ತುಗಳ ಖರೀದಿಯಲ್ಲಿ ಶೇ.7ರಷ್ಟುಏರಿಕೆ ದಾಖಲಾಗಿದೆ ಎಂದು ಸಮೀಕ್ಷೆ ಹೇಳಿದೆ.

Leave a Reply

Your email address will not be published. Required fields are marked *