2023ರ ವಿಧಾನಸಭೆ ಎಲೆಕ್ಷನ್‍ಗೆ ಕೌಂಟ್‍ಡೌನ್ ಶುರುವಾಗಿದ್ದು ರಮೇಶ್ ಜಾರಕಿಹೊಳಿ ಸಿಡಿ ಕೇಸ್‍ನಲ್ಲಿ ಡಿಕೆಶಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ

ರಮೇಶ್ ಜಾರಕಿಹೊಳಿ ದೂರು ನನ್ನನ್ನು ನಂಬಿಸಿ ಯಾರೋ ಮೋಸ ಮಾಡಿದ್ದಾರೆ. ನನಗೆ ಗೊತ್ತಿಲ್ಲದೆ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿ ನನಗೆ ಬ್ಲಾಕ್ ಮೇಲ್ ಮಾಡಿದ್ದಾರೆ. ನನ್ನಿಂದ ಹಣ ವಸೂಲಿ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಸದಾಶಿವನಗರ ಪೊಲೀಸರಿಗೆ ರಮೇಶ್ ಜಾರಕಿಹೊಳಿ ದೂರು ನೀಡಿದ್ದರು. ಆ ದೂರು ಎಸ್‍ಐಟಿಗೆ ರವಾನೆ ಆಗಿ ತನಿಖೆಯನ್ನು ನಡೆಸಿತ್ತು. ಆದರೆ ಚಾರ್ಜ್‍ಶೀಟ್ ಮಾತ್ರ ಹಾಕಲೇ ಇಲ್ಲ. ಈಗ ಅದೇ ಕೇಸ್‍ಗೆ ಮರುಜೀವ ಬರೋ ಸಾಧ್ಯತೆ ಇದ್ದು, ಸಿಬಿಐಗೆ ಕೊಡೋ ತಯಾರಿ ನಡೆದಿದೆ. ಈಗಾಗಲೇ ಸ್ಥಳೀಯ ಪೊಲೀಸರಿಗೆ ಈ ಮಾಹಿತಿ ರವಾನೆ ಆಗಿದೆ. ದೆಹಲಿ ಮಟ್ಟದಲ್ಲೂ ಚರ್ಚೆ ಆಗುತ್ತಿದೆ. ಸಿ.ಡಿ ಪ್ರಕರಣ ಸಿಬಿಐಗೆ ಹೋದರೆ ಸಿಬಿಐ ನೋಟಿಸ್ ಕೊಟ್ಟರೆ ಸಹಜವಾಗಿಯೇ ಇನ್ನು 10 ತಿಂಗಳಲ್ಲಿ ಚುನಾವಣೆ ಇರುವ ಕರ್ನಾಟಕದಲ್ಲಿ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಲಿದೆ. ಇದನ್ನೇ ಇಟ್ಟುಕೊಂಡು ರಾಜಕೀಯ ದಾಳ ಉರುಳಿಸಲು ಪ್ರಯತ್ನ ಮಾಡಲಾಗುತ್ತಿದೆ.

Leave a Reply

Your email address will not be published.