243 ವಾರ್ಡ್ ಕರಡು ಮೀಸಲಾತಿ ಪ್ರಕಟಿಸಿದ: ಬಿಬಿಎಂಪಿ

ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಕರ್ನಾಟಕ ಸರ್ಕಾರ ಬಿಬಿಎಂಪಿಯ 243 ವಾರ್ಡ್ ಕರಡು ಮೀಸಲಾತಿ ಪ್ರಕಟಿಸಿದೆ. ಒಬಿಸಿ, ಎಸ್ಸಿ/ ಎಸ್ಟಿಗಳಿಗೆ ಶೇ. 50 ಮೀಸಲಾತಿ ನಿಗದಿ ಮಾಡಲಾಗಿದೆ. ಅದೇ ರೀತಿ ಮಹಿಳೆಯರಿಗೆ ಶೇ. 50 ವಾರ್ಡ್ ಗಳನ್ನು ಮೀಸಲಿರಿಸಲಾಗಿದೆ.

ಮೀಸಲಾತಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಧಾನಸೌಧ, ಬೆಂಗಳೂರು 560001 ಇಲ್ಲಿಗೆ ಸಲ್ಲಿಸಬೇಕಿದೆ.

ಮೀಸಲಾತಿ ಪಟ್ಟಿಯನ್ನು ಪ್ರಟಿಸಿರುವ ರಾಜ್ಯ ಸರಕಾರ ಗುರುವಾರ ಸುಪ್ರೀಂಕೋರ್ಟ್ಗೆ ಈ ಪಟ್ಟಿಯನ್ನು ನೀಡಲಿದೆ. ಇನ್ನು ಆಕ್ಷೇಪಣೆಗೆ 7 ದಿಗಳ ಕಾಲಾವಕಾಶವನ್ನು ನೀಡಿರುವುದರಿಂದಾಗಿ ಸುಪ್ರೀಂಕೋರ್ಟ್ ಯಾವ ರೀತಿಯ ಆದೇಶವನ್ನು ನೀಡಲಿದೆ ಎಂದು ತಿಳಿಯಬೇಕಿದೆ. ಮೀಸಲಾತಿ ಪಟ್ಟಿಯನ್ನು ಪ್ರಕಟಿಸುವ ಮೂಲಕ ರಾಜ್ಯ ಸರಕಾರ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಿದಂತಾಗಿದೆ.

Leave a Reply

Your email address will not be published. Required fields are marked *