25ನೇ ಟೆಕ್ ಸಮ್ಮಿಟ್- ಕನ್ನಡದಲ್ಲಿಯೇ ಮಾತು ಶುರು ಮಾಡಿ ಚಾಲನೆ ನೀಡಿ ದ ಪ್ರಧಾನಿ ಮೋದಿ

ಇಂದಿನಿಂದ ಮೂರು ದಿನಗಳ ಕಾಲ ಅರಮನೆ ಮೈದಾನ ದಲ್ಲಿ ನಡೆಯುತ್ತಿರೋ 25ನೇ ಟೆಕ್ ಸಮ್ಮಿಟ್‍ಗೆ ವರ್ಚುಯಲ್ ಮೂಲಕ ಚಾಲನೆ ನೀಡಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಎಲ್ಲರಿಗೂ ನಮಸ್ಕಾರ. ಕರ್ನಾಟಕಕ್ಕೆ ಸ್ವಾಗತ. ನಮ್ಮ ಬೆಂಗಳೂರಿಗೆ ಸ್ವಾಗತ ಎಂದು ಕನ್ನಡದಲ್ಲಿಯೇ ಮಾತು ಶುರು ಮಾಡಿದ ಮೋದಿ, ಬೆಂಗಳೂರು ಟೆಕ್ನಾಲಜಿಯ ತವರೂರು. ಬೆಂಗಳೂರು ಗ್ಲೋಬಲ್ ಇಂಡೆಕ್ಸ್ ನಲ್ಲಿ ನಂಬರ್ ಒನ್ ಇದೆ. ಭಾರತದ ಇನ್ನೋವೇಶನ್ ವಿಚಾರದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿ ಇದೆ. ಭಾರತದಲ್ಲಿ ಇನ್ನೋವೇಟಿವ್ ಯುವ ಸಮೂಹ ಇದೆ. ನಮ್ಮ ದೇಶದ ಯುವ ಸಮೂಹದ ಶಕ್ತಿ ಇಡೀ ವಿಶ್ವಕ್ಕೆ ಈಗಾಗಲೇ ಪರಿಚಿತವಾಗಿದೆ.ನಾವೀಗ 3ನೇ ಅತಿ ದೊಡ್ಡ ಸ್ಟಾರ್ಟ್ ಅಪ್ ದೇಶವಾಗಿದ್ದೇವೆ. ಆರ್&ಡಿ ವಿಚಾರವಾಗಿಯೂ ನಾವು ತುಂಬಾ ಮುಂದೆ ಬಂದಿದ್ದೇವೆ. ಭಾರತೀಯ ಯುವ ಪೀಳಿಗೆಗೆ ಮೊಬೈಲ್ ಹಾಗೂ ಡೇಟಾ ಉಪಯೋಗದಿಂದ ಹಲವಾರು ಆವಿಷ್ಕಾರ ಮಾಡಿದ್ದಾರೆ. ಬ್ರಾಡ್ ಬ್ಯಾಂಡ್ ಸಂಪರ್ಕ 60 Million ನಿಂದ 810 Million ಆಗಿದೆ. ಸ್ಮಾರ್ಟ್ ಪೋನ್ ಬಳಿಕೆ 130 Million ನಿಂದ 750 Million ಆಗಿದೆ. ಇಂಟರ್‌ನೆಟ್ ಉಪಯೋಗಿಸೋ ಜನರು ನಗರಕ್ಕಿಂತ ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಇದ್ದಾರೆ ಎಂದು ಹೇಳಿದರು. ಸಿಎಂ ಬೊಮ್ಮಾಯಿ ಸಾಂಪ್ರದಾಯಿಕ ಚಾಲನೆ ನೀಡಿದರು. ಈ ಕಾರ್ಯಕ್ರಮವು ಇಂದಿನಿಂದ ನವೆಂಬರ್ 18ವರೆಗೆ 3 ದಿನಗಳ ಕಾಲ ನಡೆಯಲಿದೆ.

Leave a Reply

Your email address will not be published. Required fields are marked *