26 ತಿಂಗಳ ಬಾಕಿ ಬಿಲ್ ಪಾವತಿಗೆ ತನಿಖೆ ನೆಪ: ಇದೀಗ ನಮಗೆ ಬಾಕಿ ಹಣ ಕೊಡಿಸಿ ಇಲ್ಲ ದಯಾಮರಣ ಕೊಡಿ ಎಂದ ಬಿಬಿಎಂಪಿ ಗುತ್ತಿಗೆದಾರರು

ಸಿಲಿಕಾನ್ಸಿಟಿಯ ರಸ್ತೆ, ಚರಂಡಿ, ಹೀಗೆ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ನೆರವಾಗಿದ್ದ ಬಿಬಿಎಂಪಿ ಗುತ್ತಿಗೆದಾರರಿಗೆ ಇದೀಗ ಸಂಕಷ್ಟ ಎದುರಾಗಿದೆ. ಕಳೆದ 26 ತಿಂಗಳುಗಳಿಂದ ಗುತ್ತಿಗೆದಾರರಿಗೆ ಬಾಕಿ ಬಿಲ್ನೀಡದ ಪಾಲಿಕೆಯಿಂದ ಗುತ್ತಿಗೆದಾರರು ಹೈರಾಣಗಿದ್ದಾರೆ. ಸದ್ಯ ಬಿಬಿಎಂಪಿ, ಗುತ್ತಿಗೆದಾರರಿಗೆ ಎರಡೂವರೆ ಸಾವಿರ ಕೋಟಿ ಬಿಲ್ಬಾಕಿ ಉಳಿಸಿಕೊಂಡಿದ್ದು ಇದರಿಂದ ಗುತ್ತಿಗೆದಾರರು ಕಂಗಾಲಾಗಿದ್ದಾರೆ. 2023-24 ನೇ ಸಾಲಿನ ಪಾಲಿಕೆ ತೆರಿಗೆ ಹಣ ಸುಮಾರು 2,000ರೂ ಕೋಟಿ ಲಭ್ಯವಿದ್ದರೂ, ಸುಮಾರು 26 ತಿಂಗಳುಗಳಿಂದ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಗಳಿಗೆ ಹಣ ಪಾವತಿ ಮಾಡದೇ ಇರುವುದಕ್ಕೆ ಗುತ್ತಿಗೆದಾರರ ಸಂಘ ಆಕ್ರೋಶ ಹೊರಹಾಕಿದೆ.ಬೆಂಗಳೂರು ನಗರದ ಅಭಿವೃದ್ಧಿ ಕೆಲಸಗಳಿಗೆ ಸಾಥ್ ನೀಡುತ್ತಿದ್ದ ಗುತ್ತಿಗೆದಾರರ ಸಂಘ ರೊಚ್ಚಿಗೆದ್ದಿದ್ದಾರೆ. ಬಾಕಿ ಬಿಲ್ ಪಾವತಿ ಮಾಡಿ ಅಂದರೆ ತನಿಖೆಯ ನೆಪ ಒಡ್ಡಿ ಬಿಲ್ ಬಿಡುಗಡೆ ಮಾಡದೇ ವಿಳಂಬ ನೀತಿ ತೋರುತ್ತಿರುವ ಸರ್ಕಾರ ಎಂದು ಗರಂ ಆಗಿದ್ದಾರೆ. ಇನ್ನುಮುಂದೆ ಸುತಾರಾಂ ಯಾವುದೇ ಕೆಲಸ ಮಾಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.ಬೆಂಗಳೂರು ನಗರ ಪಾಲಿಕೆ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ್ದ ಗುತ್ತಿಗೆದಾರರು ಈಗ ಪಾಲಿಕೆ ಪೆಂಡಿಂಗ್ ಇಟ್ಟು ಕೊಂಡ ಹಣ ರಿಲೀಸ್ ಮಾಡದೇ ಬದುಕು ನಡೆಸಲು ಹೆಣಗಾಡುತ್ತಿದ್ದಾರೆ. ಹಲವು ಬಾರಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಮನವಿ ಮಾಡಿದ್ದ ಗುತ್ತಿಗೆದಾರರು, ಇದೀಗ ನಮಗೆ ಬಾಕಿ ಹಣ ಕೊಡಿಸಿ ಇಲ್ಲ ದಯಾಮರಣ ಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ.ಇನ್ನು 2019 ರಿಂದ 2023ರವರೆಗೆ ನಡೆದಿರುವ ಕಾಮಗಾರಿಗಳ ವರದಿ ನೀಡಲು ಡಿಸಿಎಂ ಡಿ.ಕೆ.ಶಿವಕುಮಾರ್ಸೂಚನೆ ನೀಡಿದ್ದು, ಇದು ಕೂಡ ಬಿಬಿಎಂಪಿ ಗುತ್ತಿಗೆದಾರರನ್ನ ಹೈರಾಣಾಗಿಸಿದೆ. ಸದ್ಯ ಈ ವಿಚಾರವಾಗಿ ಮುಂದುವರಿದಿರುವ ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್, ಇದೀಗ ಕಾಮಗಾರಿಗಳ ತನಿಖೆ ನಡೆಸೋಕೆ ಎಸ್ಐಟಿ ತಂಡವನ್ನು ಕೂಡ ರಚನೆ ಮಾಡಿದ್ದಾರೆ.

Leave a Reply

Your email address will not be published. Required fields are marked *