3ಡಿ ತಂತ್ರಜ್ಞಾನ ಬಳಸಿ ಭಾರತದ ಮೊಟ್ಟ ಮೊದಲ ಅಂಚೆ ಕಚೇರಿ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ. ಕಡಿಮೆ ಸಮಯದಲ್ಲಿ ಮತ್ತು ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಕಟ್ಟಡಗಳನ್ನು ನಿರ್ಮಾಣ ಮಾಡಬಹುದಾಗಿದೆ. ಕಾಂಕ್ರೀಟ್ ಮಿಶ್ರಣ ಬಳಸಿ ಯಂತ್ರೋಪಕರಣಗಳ ಸಹಾಯದಿಂದ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ಕೇವಲ ಒಂದು ತಿಂಗಳಲ್ಲೇ ಅಂಚೆ ಕಚೇರಿ ನಿರ್ಮಿಸಲು ಉದ್ದೇಶಿಲಾಗಿದೆ. ಹಲಸೂರಿನ ಕೇಂಬ್ರಿಡ್ಜ್ ಲೇಔಟ್ ಈ ತಾಂತ್ರಿಕ ವಿಸ್ಮಯಕ್ಕೆ ಸಾಕ್ಷಿಯಾಗಲಿದ್ದು, 3ಡಿ ಪ್ರಿಂಟಿಂಗ್ ಬಳಸಿ ನಿರ್ಮಿಸಲಾದ ದೇಶದ ಮೊದಲ ಅಂಚೆ ಕಚೇರಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.