ರಷ್ಯಾ ಮತ್ತು ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧ ಇದೀಗ 3ನೇ ಮಹಾಯುದ್ಧಕ್ಕೆ ದಾರಿ ಮಾಡಿಕೊಟ್ಟಿದೆ. ಅದರಲ್ಲೂ ಇರಲಾರದೆ ಅದೇನೋ ಬಿಟ್ಟುಕೊಂಡರು ಅನ್ನೋ ಹಾಗೆ ಸರ್ವಾಧಿಕಾರಿ ಮಹಾಯುದ್ಧಕ್ಕೆ ಮುಹೂರ್ತ ಇಟ್ಟಂತಿದೆ.
ಉತ್ತರ ಕೊರಿಯಾ ಹಾಗೂ ಅಮೆರಿಕ ನಡುವೆ ಬೆಂಕಿ ಹೊತ್ತಿಕೊಂಡಿದೆ. ಆದರೆ ಇದೇ ಬೆಂಕಿ ಈಗ ಜಗತ್ತನ್ನು ಸುಡುವ ಮುನ್ಸೂಚನೆ ನೀಡಿದೆ. ಏಕೆಂದರೆ ಉಕ್ರೇನ್ & ರಷ್ಯಾ ಯುದ್ಧ ಮಾಡುವಾಗ ಉತ್ತರ ಕೊರಿಯಾ ಕೂಡ ಮಧ್ಯಪ್ರವೇಶ ಮಾಡಿದೆ. ಉಕ್ರೇನ್ ಪರ ಅಮೆರಿಕ ನಿಂತಿರುವ ಕಾರಣಕ್ಕೆ ರಷ್ಯಾ ಪರ ಉತ್ತರ ಕೊರಿಯಾ ನಿಲ್ಲುತ್ತಿದೆ. ಇದೀಗ ರಷ್ಯಾ ಸೇನೆಯ ಬಳಿ ಶಸ್ತ್ರಾಸ್ತ್ರ ಖಾಲಿಯಾದ ಕಾರಣ ಉತ್ತರ ಕೊರಿಯಾ ತನ್ನಲ್ಲಿರುವ ಅಸ್ತ್ರ ರಷ್ಯಾ ಸೇನೆಗೆ ನೀಡಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.ಹೌದು, ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರಷ್ಯಾ ಕಡೆ ಪ್ರಯಾಣ ಬೆಳೆಸುತ್ತಾನೆ ಎನ್ನಲಾಗಿದೆ. ರಷ್ಯಾ ಜೊತೆ ಸೇರಿ ಶಸ್ತ್ರಾಸ್ತ್ರ ಪೂರೈಕೆಗೆ ಮಾತುಕತೆ ನಡೆಸಲಿದ್ದಾನೆ ಎನ್ನಲಾಗಿದೆ. ಉಕ್ರೇನ್ & ರಷ್ಯಾ ನಡುವಿನ ಯುದ್ಧದ ಬೆಂಕಿ ಈಗ ಜಗತ್ತನ್ನೇ ಸುಡುವ ಸೂಚನೆ ನೀಡಿದೆ. ಅದರಲ್ಲೂ ಉತ್ತರ ಕೊರಿಯಾ ನಡೆ ಬಗ್ಗೆ ಅಮೆರಿಕ ರೊಚ್ಚಿಗೆದ್ದಿದೆ.