ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಸುಮಾರು ಒಂದೂವರೆ ವರ್ಷದಿಂದ 40% ಕಮಿಷನ್ ಆರೋಪ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ದಾಖಲೆ ಕೊಟ್ಟಿಲ್ಲ. ತನಿಖೆ ಮಾಡಿದ್ರೆ ನಮಗೆ ನ್ಯಾಯ ಸಿಗುವ ಭರವಸೆ ಇದೆ. ಸರ್ಕಾರ ನಿಜವಾಗ್ಲೂ ಭ್ರಷ್ಟಾಚಾರ ವಿರುದ್ಧ ಇದ್ದರೆ 40% ಕಮಿಷನ್ ಸೇರಿದಂತೆ ಎಲ್ಲದರ ಬಗ್ಗೆ ತನಿಖೆ ಮಾಡಲಿ. 2013 ರಿಂದ 2023 ಮಾರ್ಚ್ ವರೆಗೂ ಎಲ್ಲಾ ಕೇಸ್ ಗಳು ಈ ಕಮಿಷನ್ ಮುಖಾಂತರ ಮುಂದೆ ಬರಲಿ. ಸೆಲೆಕ್ಟಿವ್ ಆಗಿ ರಾಜಕೀಯ ಪ್ರೇರಿತವಾಗಿ ತನಿಖೆ ಮಾಡಿದ್ರೆ ಹೇಗೆ..? ಯಾರು ಯಾರು ತಪ್ಪಿತಸ್ಥರು ಇದ್ದಾರೋ ಅವರಿಗೆ ಶಿಕ್ಷೆಯಾಗಲಿ. ಈಗಾಗಲೇ ಹಲವು ಕೇಸ್ ಗಳು ಲೋಕಾಯುಕ್ತಾ ಮುಂದೆ ಇದೆ. 40% ತೆಗೆದುಕೊಂಡಿದ್ದಾರಂತ ಹೇಳಿ ಬಿಬಿಎಂಪಿ ಹಾಗೂ ಇತರ ಇಲಾಖೆ ವಿರುದ್ಧ ಲೋಕಾಯುಕ್ತಾದಲ್ಲಿ ಕೇಸ್ ಇದೆ. ಅವುಗಳನ್ನ ಕೂಡ ತನಿಖೆ ನಡೆಸಲಿ. ಕೆಂಪಣ್ಣ ಆರೋಪದ ವಿರುದ್ಧ ಮುನಿರತ್ನ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಇನ್ನೂ ಅದಕ್ಕೆ ಅವರು ದಾಖಲೆ ಕೊಟ್ಟಿಲ್ಲ, ಉತ್ತರ ಕೊಟ್ಟಿಲ್ಲ ಎಂದರು.