40-45 ದಿನಗಳು ಮಾತ್ರ ಬಿಜೆಪಿ ಸರ್ಕಾರ ಇರುತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರ್ತಿದ್ದಂತೆ ಡೆಟಾಲ್ ಗಂಜಲ ಹಾಕಿ ವಿಧಾನ ಸೌಧ ಕ್ಲೀನ್ ಮಾಡಿಸ್ತೀವಿ: ಡಿಕೆಶಿ

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ರಾಜ್ಯದಲ್ಲಿ ಇನ್ನೂ 40-45 ದಿನಗಳು ಮಾತ್ರ ಬಿಜೆಪಿ ಸರ್ಕಾರ ಇರುತ್ತೆ. ಆಮೇಲೆ ಈ ದುಷ್ಟ ಸರ್ಕಾರವನ್ನ ಜನ ಓಡಿಸ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರ್ತಿದ್ದಂತೆ ಡೆಟಾಲ್, ಗಂಜಲ ಹಾಕಿ ವಿಧಾನ ಸೌಧ ಕ್ಲೀನ್ ಮಾಡಿಸ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗುಡುಗಿದ್ದಾರೆ . ನಮ್ಮ ಪ್ರಜಾಧ್ವನಿ ಯಾತ್ರೆಯಿಂದ ಬಿಜೆಪಿಗೆ ತಲೆ ಕೆಟ್ಟು ಹೋಗಿದೆ. 200 ಯುನಿಟ್ ವಿದ್ಯುತ್, 2 ಸಾವಿರ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದ ಮೇಲೆ ತಲೆ ಕೆಡಿಸಿಕೊಂಡಿದ್ದಾರೆ. ಇದರಿಂದ ಬಿಜೆಪಿಯಲ್ಲಿ ಆಂತರಿಕ ಜಗಳ ಹೆಚ್ಚಗಿದೆ. ಯಡಿಯೂರಪ್ಪ -ಬೊಮ್ಮಾಯಿ ಜಗಳ, ಸಿ.ಟಿ ರವಿ – ಕಟೀಲ್ ನಡುವೆ ಜಗಳ ಇದೆ. ಇದನ್ನ ಹೇಳೋಕೆ ಆಗ್ತಿಲ್ಲ ಅಷ್ಟೇ. ಅದಕ್ಕಾಗಿ ನಮ್ಮ ಜೊತೆಗಿದ್ದ ಸಚಿವ ಸುಧಾಕರ್ ಅವರಿಂದ ಪ್ರೆಸ್ಮೀಟ್ ಮಾಡಿಸಿದ್ದಾರೆ ಎಂದು ಕುಟುಕಿದ್ದಾರೆ.

Leave a Reply

Your email address will not be published. Required fields are marked *