800 ಕೋಟಿ ದಾಟಿದ ವಿಶ್ವದ ಜನಸಂಖ್ಯೆ: ವಿಶ್ವಸಂಸ್ಥೆ

ಕಳೆದ 12 ವರ್ಷ ಜನಸಂಖ್ಯೆಯಲ್ಲಿ 100 ಕೋಟಿಯಷ್ಟು ಹೆಚ್ಚಳವಾಗಿದ್ದು, ವಿಶ್ವದ ಜನಸಂಖ್ಯೆ ಇದೀಗ 800 ಕೋಟಿಯಾಗಿದೆ ಎಂದು ವಿಶ್ವಸಂಸ್ಥೆ ವರದಿ ಹೇಳುತ್ತದೆ.
ಭೂಮಿಯ ಮೇಲೆ ಮಾನವನ ಉಗಮದ ನಂತರ ಜನಸಂಖ್ಯೆ 100 ಕೋಟಿ ಗಡಿ ತಲುಪಲು ಸುಮಾರು 1803 ವರ್ಷದಷ್ಟು(ಕ್ರಿ.ಶ. 1803) ಸುದೀರ್ಘ ಅವಧಿ ಬೇಕಾಯಿತು. ಬಳಿಕ ಸುಮಾರು 124 ವರ್ಷಗಳ ನಂತರ 1927ರಲ್ಲಿ ಜನಸಂಖ್ಯೆ 200 ಕೋಟಿ ಗಡಿ ದಾಟಿತು. ಆದರೆ ಮುಂದಿನ 33 ವರ್ಷಗಳಲ್ಲಿ ಎಂದರೆ 1960ರಲ್ಲಿ 300 ಕೋಟಿ ಹಾಗೂ ನಂತರದ 15 ವರ್ಷಗಳಲ್ಲಿ 400 ಕೋಟಿ ಜನಸಂಖ್ಯೆ ಗಡಿ ತಲುಪಿತು. 1975ರ ಬಳಿಕ ಜನಸಂಖ್ಯೆಯ ಪ್ರಮಾಣದಲ್ಲಿ ಭಾರಿ ಏರಿಕೆಯಾಗುತ್ತಿದ್ದು, ಪ್ರತಿ 12 ವರ್ಷಗಳಿಗೊಮ್ಮೆ ಜನಸಂಖ್ಯೆಯಲ್ಲಿ 100 ಕೋಟಿಯಷ್ಟು ಏರಿಕೆ ದಾಖಲಾಗುತ್ತಲೇ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಜನಸಂಖ್ಯಾ ಬೆಳವಣಿಗೆ ದರದಲ್ಲಿ ಕೊಂಚ ಇಳಿಕೆ ಕಂಡುಬಂದರೂ, 2022ರಲ್ಲಿ ಜನಸಂಖ್ಯೆ 800 ಕೋಟಿ ಗಡಿ ದಾಟಿದೆ. ಆದರೆ ಮುಂದಿನ 100 ಕೋಟಿ ಹೆಚ್ಚಳಕ್ಕೆ ಅಂದಾಜು 15 ವರ್ಷ ಬೇಕಾಗಲಿದೆ ಎಂಬ ಅಂದಾಜಿದೆ.

Leave a Reply

Your email address will not be published. Required fields are marked *