90 ನಿಮಿಷಗಳಲ್ಲಿ 21 ಭೂಕಂಪನ- ಹೊಸ ವರ್ಷವನ್ನು ನೋವಿನಿಂದ ಬರಮಾಡಿಕೊಂಡ ದೇಶ ಜಪಾನ್!

2024ನೇ ವರ್ಷವನ್ನು ಎಲ್ಲಾ ದೇಶಗಳು ಸಂಭ್ರಮದಿಂದ ಬರಮಾಡಿಕೊಂಡರೆ ಈ ದೇಶ ಮಾತ್ರ ಕಣ್ಣೀರಿನಿಂದ ಬರಮಾಡಿಕೊಂಡಿದೆ. ಅದುವೇ ಜಪಾನ್.ಹೌದು.. ಜಪಾನ್‌ನಲ್ಲಿ ಹೊಸ ವರ್ಷದಂದೇ ತೀವ್ರತೆಯ ಭೂಕಂಪ ಸಂಭವಿಸಿದೆ. 90 ನಿಮಿಷಗಳಲ್ಲಿ 21 ಭೂಕಂಪಗಳು ಸಂಭವಿಸಿವೆ ಭೂಕಂಪನಗಳಿಗೆ ಜನ ತತ್ತರಿಸಿ ಹೋಗಿದ್ದಾರೆ. ನೋಡ ನೋಡುತ್ತಿದ್ದಂತೆ ಮನೆ, ಮರ, ವಿದ್ಯುತ್ ಕಂಬ, ರಸ್ತೆಗಳು ಕುಸಿದು ಹೋಗಿವೆ. ಜಪಾನ್ ಅಕ್ಷರಶ: ನಲುಗಿ ಹೋಗಿದೆ.ಇವುಗಳಲ್ಲಿ ಒಂದರ ತೀವ್ರತೆಯನ್ನು ರಿಯಾಕ್ಟರ್ ಮಾಪಕದಲ್ಲಿ 7.6 ಎಂದು ಅಳೆಯಲಾಗಿದೆ. ಈ ಕಾರಣದಿಂದಾಗಿ ಸಮುದ್ರದಲ್ಲಿ 5 ಮೀಟರ್ ಎತ್ತರದ ಅಲೆಗಳು ಕಾಣಿಸಿಕೊಳ್ಳುವ ಹಾಗೂ ಸುನಾಮಿ ಎಚ್ಚರಿಕೆ ನೀಡಲಾಗಿದೆ.ಈ ಭೂಕಂಪ 2011ರ ನೋವನ್ನು ಮತ್ತೊಮ್ಮೆ ನೆನಪಿಸಿದೆ. ಆ ಸಮಯದಲ್ಲಿ ಸುನಾಮಿಯಿಂದಾಗಿ 15,000 ಕ್ಕೂ ಹೆಚ್ಚು ಜನರು ಪ್ರಾಣಕಳೆದುಕೊಂಡರು. 2,000 ಕ್ಕೂ ಹೆಚ್ಚು ಜನರು ಇನ್ನೂ ಕಾಣೆಯಾದ ಪಟ್ಟಿಯಲ್ಲಿ ಸೇರಿದ್ದಾರೆ.

Leave a Reply

Your email address will not be published. Required fields are marked *