ಕೋವಿಡ್19 ಸಾಂಕ್ರಮಿಕ ಸಮಯದಲ್ಲಿ ಜಾರಿ ಮಾಡಲಾಗಿದ್ದ ಎಲ್ಲ ನಿಯಮಗಳನ್ನು ಕೊನೆಗೊಳಿಸಿ ದೇಶದ ಅತಿದೊಡ್ಡ ಐಟಿ ಸೇವಾ ಕಂಪನಿ ಟಿಸಿಎಸ್ ತನ್ನ 6.14 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಚೇರಿಗಳಿಂದ ಕೆಲಸ ಮಾಡುವಂತೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಸೂಚನೆ ನೀಡಿದೆ. ಸಾಂಕ್ರಾಮಿಕ ರೋಗದಿಂದಾಗಿ ಪ್ರಾರಂಭವಾಗಿದ್ದ ರಿಮೋಟ್ ವರ್ಕಿಂಗ್ ಕಾರ್ಯಕ್ರಮಗಳನ್ನು ಕೊನೆಗೊಳಿಸಿದೆ.ಟಿಸಿಎಸ್ಕಂಪನಿಯು ರಿಮೋಟ್ಕೆಲಸ ಘೋಷಿಸಿದ ಮೊದಲ ಪ್ರಮುಖ ಐಟಿ ಸೇವಾ ಸಂಸ್ಥೆ. ವ್ಯಾಲ್ಯೂ ಸಿಸ್ಟಮ್ಜಾರಿಗೊಳಿಸುವ ಅಗತ್ಯತೆ ಮತ್ತು ಸಹ ಕೆಲಸದಿಂದ ಬರುವ ಉತ್ಪಾದಕತೆಯ ಲಾಭಗಳ ಮೇಲಿನ ನಂಬಿಕೆಯಿಂದಾಗಿ ಕಚೇರಿಗಳಿಗೆ ಮರಳಲು ತನ್ನ ಉದ್ಯೋಗಿಗಳಿಗೆ ಹೇಳಿದೆ. ಎಂದು ಟಿಸಿಎಸ್ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಡ್ ಸುದ್ದಿಗಾರರಿಗೆ ತಿಳಿಸಿದ್ದಾರೆ.