ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು ಎಂಬಂತಹ ಸತ್ಯವನ್ನು ಹೇಳಿದರೆ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

ಚಿಕ್ಕಬಾಸೂರಿನಲ್ಲಿ ಸಿದ್ದರಾಮೇಶ್ವರ 851ನೇ ಜಯಂತಿ, ನೊಳಂಬ ಸಮಾವೇಶದ ಸಮಾರೋಪದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಮಾಡಬಾರದನ್ನೆಲ್ಲಾ ಮಾಡಿ ದೇವಸ್ಥಾನಕ್ಕೆ ಹೋಗುವ ಆಸ್ತಿಕರ ಮನಸ್ಥಿತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಣೆ ಯಾರೂ ಶ್ರೀಮಂತರಾಗಿಲ್ಲ. ನಮ್ಮ ತಂದೆಗೂ 6 ಜನ ಮಕ್ಕಳು. ಆದರೆ ಯಾರೊಬ್ಬರೂ ಓದಲಿಲ್ಲ, ನನಗೊಬ್ಬನಿಗೆ ಓದುವ ಅವಕಾಶ ಸಿಕ್ಕಿತ್ತು. ಅದು ನನ್ನ ಹಣೆ ಬರಹದಲ್ಲ, ಬದಲಾಗಿ ನಾನು ಮಾಡಿದ ಪ್ರಯತ್ನ ಎಂದರು. ವಿಷ್ಣುವಿನ ತಲೆಯಿಂದ ಹುಟ್ಟಿದವನು ಬ್ರಾಹ್ಮಣ, ತೋಳಿನಿಂದ ಕ್ಷತ್ರಿಯ, ಹೊಟ್ಟೆಭಾಗದಿಂದ ವೈಶ್ಯ, ನಾದದ ಕೆಳಗಿನಿಂದ ಹುಟ್ಟಿದವನು ಶೂದ್ರನೆಂದು ಸ್ವಾರ್ಥಕ್ಕಾಗಿ ಇಂತಹ ಸುಳ್ಳುಗಳನ್ನು ಹೇಳಿಕೊಂಡು ತಿರುಗಾಡುತ್ತಿರುವವರು ವೈಜ್ಞಾನಿಕ ಕಾರಣ ಕೊಡ ಬಲ್ಲರೇ..? ಹೀಗಾಗಿ ಶರಣರು ತಮ್ಮ ಬದುಕಿನಲ್ಲಿ ಇಂತಹ ಮೌಡ್ಯ, ಕಂದಾಚಾರ ಸೇರಿದಂತೆ ವರ್ಗ ಪದ್ಧತಿಯನ್ನು ತಿರಸ್ಕರಿಸಿದ್ದರು.

 

Leave a Reply

Your email address will not be published. Required fields are marked *