ಸಿಎಎ ಜಾರಿಗೆ ತಂದಿರುವ ಕುರಿತು ಮಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೇಂದ್ರ ಸರ್ಕಾರ ಮೂರುವರೆ ವರ್ಷ ನಿದ್ರೆ ಮಾಡುತ್ತಿತ್ತು. ಈಗ ಎಲೆಕ್ಷನ್ ಬಂದಿದೆ, ಈ ಅಸ್ಸಾಂ ಪಶ್ಚಿಮ ಬಂಗಾಳದಲ್ಲಿ ಜಾತಿ ಹೋರಾಟ ನಡೆಯಿತು. ಈ ದೇಶದಲ್ಲಿ ಶಾಂತಿ ಕದಲಿಸಬೇಕು ಎಂದು ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.ಎಲ್ಲಾ ಜಾತಿ ಧರ್ಮ ರಕ್ಷಣೆ ಮಾಡುವುದು ನಮ್ಮ ಪಕ್ಷದ ಕರ್ತವ್ಯ. ಹೀಗಾಗಿ ಸಿಎಎ ಜಾರಿಗೆ ತಂದಿರುವ ನಿರ್ಧಾರವನ್ನು ಖಂಡಿಸುವುದಾಗಿ ಹೇಳಿದರು. ಇದೇ ವೇಳೆ ಚುನಾವಣೆಗೆ ಕಾಂಗ್ರೆಸ್ ಲಿಸ್ಟ್ ಬಗ್ಗೆ ಪ್ರತಿಕ್ರಿಯಿಸಿ, ಸ್ಕ್ರೀನಿಂಗ್ ಕಮಿಟಿ ಸಭೆ ಆಗಿದೆ. ಹೆಚ್ಚು ಕಡಿಮೆ ಎಲ್ಲಾ ಚರ್ಚೆ ಆಗಿದೆ. ಕೆಲವು ಸಿಂಗಲ್ ನೇಮ್ ಬಗ್ಗೆಯೂ ಸಹ ಚರ್ಚೆ ಆಗಿದೆ. ಸೆಂಟ್ರಲ್ ಎಲೆಕ್ಷನ್ ಕಮಿಟಿ ಯಾವತ್ತಾದರೂ ನಮಗೆ ಕರೆಯಬಹುದು. ದೆಹಲಿಯಲ್ಲಿ ಸಭೆ ನಡೆಯುತ್ತಿದೆ. ನಾವು ಇಲ್ಲಿ ಸಂಪೂರ್ಣ ಚರ್ಚೆ ಮುಗಿಸಿದ್ದೇವೆ. 14, 15 ಕ್ಕೆ ಕರೆಯಬಹುದು, ನಾನು ಹಾಗೂ ಚೀಪ್ ಮಿನಿಸ್ಟರ್ ಹೋಗ್ತೀವಿ. ಫೈನಲ್ ಆಗಿ ಮಾತಾಡಿಕೊಂಡು ಬರುತ್ತೇವೆ ಎಂದರು.ಈ ಸೀಟ್ ವಿಚಾರದಲ್ಲಿ ನಮ್ಮ ಅಭಿಪ್ರಾಯ ಏನೇ ಇರಬಹುದು. ಆದರೆ ಹೈಕಮಾಂಡೇ ಅಂತಿಮ ತೀರ್ಮಾನ ಮಾಡಲಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಅಂತಿಮ ತೀರ್ಮಾನ ಮಾಡುತ್ತಾರೆ. ಸಮಿತಿ ಮುಂದೆ ನಾವು ಮಂಡಿಸುತ್ತೇವೆ. 75% ಸಿಂಗಲ್ ನೇಮ್ ಆಗಿದೆ ಎಂದು ಡಿಕೆಶಿ ಹೇಳಿದರು.