ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಮರು ಆಯ್ಕೆ ಆದ ಬಳಿಕ ಉಕ್ರೇನ್‌ಗೆ ಚಳಿ ಬಿಡಿಸುತ್ತಿದ್ದಾರೆ. ಕಳೆದ 2 ವರ್ಷಗಳಿಂದಲೂ ನಡೆಯುತ್ತಿರುವ ರಷ್ಯಾ & ಉಕ್ರೇನ್ ಯುದ್ಧ ಈಗ ಮತ್ತೊಂದು ತಿರುವು ಪಡೆದಿದೆ. ಪುಟಿನ್ ಅವರು ರಷ್ಯಾದ ಸೇನೆಗೆ ಪೂರ್ತಿ ಅಧಿಕಾರ ಕೊಟ್ಟು ಉಕ್ರೇನ್ ವಿರುದ್ಧ ದಾಳಿಗೆ ತಂತ್ರ ರೂಪಿಸಿದ್ದಾರೆ. ಹೀಗೆ ಉಕ್ರೇನ್ ಪರಿಸ್ಥಿತಿ ಕೈಮೀರಿ ಹೋಗಿರುವಾಗಲೇ ಅಲ್ಲಿನ ನಗರಗಳು ಸಂಪೂರ್ಣ ಕತ್ತಲೆಯಲ್ಲಿ ಮುಳುಗಿ ಹೋಗಿವೆ.
ಉಕ್ರೇನ್ ವಿರುದ್ಧ ರಷ್ಯಾ ಸೇನೆ ದಿನದಿಂದ ದಿನಕ್ಕೆ ತನ್ನ ದಾಳಿಯ ಹೆಚ್ಚಿಸುತ್ತಿದ್ದು, ಹೀಗೆ ಇಬ್ಬರ ನಡುವೆ ಘೋರ ಕಾಳಗ ನಡೆಯುತ್ತಿದೆ. ಈ ಯುದ್ಧಕ್ಕೆ ಈವರೆಗೆ 50000 ನಾಗರಿಕರು ಬಲಿಯಾಗಿ, ಉಕ್ರೇನ್‌ನ 70,000 ಸೈನಿಕರು ಜೀವ ಬಿಟ್ಟಿದ್ದಾರೆ ಎಂಬುದು ಉಕ್ರೇನ್ ಆರೋಪ. ಈ ಮೂಲಕ ಒಟ್ಟಾರೆ 1.20 ಲಕ್ಷ ಉಕ್ರೇನ್ ಮೂಲದ ಜನರ ಜೀವವು ಹೋಗಿದೆ ಅಂತಾ, ಉಕ್ರೇನ್ ಆರೋಪ ಮಾಡುತ್ತಿದೆ. ಈ ಸಂಕಷ್ಟಗಳ ಮಧ್ಯೆ ಇದೀಗ ಉಕ್ರೇನ್ & ರಷ್ಯಾ ಯುದ್ಧ 2 ವರ್ಷ ಪೂರೈಸಿದೆ. ಮೊನ್ನೆ ಮೊನ್ನೆಯಷ್ಟೇ ಉಕ್ರೇನ್‌ನ ವಿದ್ಯುತ್ ತಯಾರಿಕಾ ಘಟಕಗಳ ಮೇಲೆ ರಷ್ಯಾ ಸೇನೆ, ದೊಡ್ಡ ಪ್ರಮಾಣದ ದಾಳಿ ಮಾಡಿದ್ದು ಭಾಗಶಃ ಉಕ್ರೇನ್ ಈಗ ಕತ್ತಲೆಯಲ್ಲಿ ಮುಳುಗಿದೆ.