ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ರಸ್ತೆ ಗುಂಡಿಗಳದೇ ಕಾರುಬಾರು ಈಗ ಪಾಲಿಕೆ ಹೊಸ ದಾರಿ ಹಿಡಿದಿದ್ದು, ಆ್ಯಪ್ ಲೆಕ್ಕಾಚಾರದ ಮೂಲಕ ಗುಂಡಿ ಮುಚ್ಚಲು ಪಾಲಿಗೆ ಮುಂದಾಗಿದೆ. ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೂಲಕ ಗುಂಡಿಗಳನ್ನು ಪಾಲಿಕೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಗುರುತಿಸಲು ಅವಕಾಶ ಇದೆ. ಈ ಗುಂಡಿಗಳ ಆಳ, ಉದ್ದ ಗುರುತಿಸಿ ಗುಂಡಿ ಮುಚ್ಚುವ ಕಾರ್ಯ ಸಾಕ್ಷಿ ಸಮೇತ ಮಾಹಿತಿ ನೀಡಿದರೆ ಮಾತ್ರ ಹಣ ಬಿಡುಗಡೆಯ ಲೆಕ್ಕಚಾರ. ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿಯದೇ ದೊಡ್ಡ ಗೋಲ್ ಮಾಲ್. ಯಾವುದೋ ರಸ್ತೆ ತೋರಿಸಿದರು ಮುಚ್ಚಿದ್ದೀವಿ ಅಂತಾರೆ. ಆದ್ರೆ ಸಿಟಿ ಮಧ್ಯಭಾಗದಲ್ಲೇ ಹಲವೆಡೆ ಮುಚ್ಚಿಲ್ಲ. ಇದೆಲ್ಲ ಸುಮ್ಮನೆ ಕಾಲಕಳೆಯುವ ಐಡಿಯಾ ಎಂದು ಆ್ಯಪ್ ಲೆಕ್ಕಾಚಾರದ ಕುರಿತಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.