ಭಾರತ್ ಜೋಡೋ ಯಾತ್ರೆ ಹಿನ್ನೆಲೆ ಬಳ್ಳಾರಿಯಲ್ಲಿಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಈ ಸರ್ಕಾರ ನಮ್ಮ ಕಾರ್ಯಕರ್ತರು ನಾಯಕರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಸರ್ಕಾರ ತಪ್ಪು ಮಾಡಿದಾಗ ಅದನ್ನು ಪ್ರಶ್ನೆ ಮಾಡುವುದು ಪ್ರತಿ ನಾಗರಿಕರ ಹಕ್ಕು. ಇದು 40 ಪರ್ಸೆಂಟ್ ಸರ್ಕಾರ, ಆದರೆ ಈ ಸರ್ಕಾರವನ್ನು ನಾವು ಯಾರೂ ಪ್ರಶ್ನೆ ಮಾಡುವ ಹಾಗೆ ಇಲ್ಲ. ಮೋದಿ , ಅಮಿತ್ ಶಾ, ಬೊಮ್ಮಾಯಿ ಅವರನ್ನ ನಾವು ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ ಪ್ರಶ್ನೆ ಮಾಡಿದರೆ ನಮ್ಮ ಮೇಲೆ ಕೇಸ್ ಹಾಕ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಅಸಮಾಧಾನ ಹೊರಹಾಕಿದರು. ಇದು ಭ್ರಷ್ಟಾಚಾರ ಸರ್ಕಾರ, ಇವರು ತಮ್ಮ ಅಪ್ಪನ ದುಡ್ಡು ಹೊಡೀತಿಲ್ಲ. ಅದು ನಮ್ಮ ದುಡ್ಡು, ನಾಗರಿಕರ ದುಡ್ಡು ಲೂಟಿ ಮಾಡುತ್ತಿದ್ದಾರೆ.