ಇದೇ ಆಗಸ್ಟ್ 31 ರಂದು INDIA ಒಕ್ಕೂಟದ 3ನೇ ಸಭೆ ಮುಂಬೈನಲ್ಲಿ ನಡೆಯಲಿದ್ದು, ಈ ಸಭೆಯಲ್ಲಿ ಒಕ್ಕೂಟಕ್ಕೆ ಸಾಮಾನ್ಯ ಧ್ವಜ ಹೊಂದುವ ಬಗ್ಗೆ ಚರ್ಚೆ ನಡೆಯಲಿದೆ.ಮೂಲಗಳ ಪ್ರಕಾರ, ಅಶೋಕ ಚಕ್ರವಿಲ್ಲದ ತ್ರಿವರ್ಣ ಧ್ವಜವನ್ನು ಆಯ್ಕೆ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಒಕ್ಕೂಟದಲ್ಲಿರುವ ಎಲ್ಲ ಪಕ್ಷಗಳು ತಮ್ಮದೇ ಆದ ಚಿಹ್ನೆ ಮತ್ತು ಧ್ವಜವನ್ನ ಹೊಂದಿವೆ. ಆದರೆ ಒಕ್ಕೂಟಕ್ಕೆ ಒಂದು ಸಾಮಾನ್ಯ ಧ್ವಜ ಹೊಂದಿವ ಬಗ್ಗೆ ಚರ್ಚೆ ನಡೆದಿದೆ. ಒಕ್ಕೂಟದ ಹೆಸರು INDIA ಆಗಿರುವ ಹಿನ್ನೆಲೆ ಅದಕ್ಕೆ ಪೂರಕ ಎನ್ನುವಂತೆ ರಾಷ್ಟ್ರಧ್ವಜವನ್ನೇ ಹೋಲುವ ಧ್ವಜದ ಮೇಲೆ ಆಸಕ್ತಿ ಹೆಚ್ಚಿದೆ. ಮುಂಬೈ ಸಭೆಯ ನಂತರ ಸೆಪ್ಟೆಂಬರ್‌ನಲ್ಲಿ ರಾಷ್ಟ್ರವ್ಯಾಪಿ ರ‍್ಯಾಲಿಗಳು ಪ್ರಾರಂಭವಾಗಲಿದ್ದು, ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ 6 ರಿಂದ 7 ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ರ‍್ಯಾಲಿಗಳು ಮತ್ತು ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನ ವೈಯಕ್ತಿಕ ಗುರಿಯಾಗಿಸುವ ಬದಲು ಸರ್ಕಾರದ ನೀತಿಗಳು, ಜಾತಿ ಆಧಾರಿತ ಜನಗಣತಿ, ಹಣದುಬ್ಬರ, ನಿರುದ್ಯೋಗ ಮತ್ತು ಇತರ ಸಾಮಾಜಿಕ ಕಾಳಜಿಗಳಂತಹ ವಿವಿಧ ವಿಷಯಗಳ ಮೇಲೆ ಟಾರ್ಗೆಟ್‌ಮಾಡಲು ನಿರ್ಧರಿಸಿದೆ. ವಿರೋಧ ಪಕ್ಷಕ್ಕೆ ಅಧ್ಯಕ್ಷರು, ಒಬ್ಬರು ಮುಖ್ಯ ಸಂಯೋಜಕರು ಮತ್ತು 4 ರಿಂದ 5 ಪ್ರಾದೇಶಿಕ ಸಂಯೋಜಕರನ್ನ ನೇಮಿಸುವ ಪ್ರಸ್ತಾವನೆ ಇದೆ ಎಂದು ಮೂಲಗಳು ತಿಳಿಸಿವೆ.