ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿಗೆ ರಿಲೀಫ್ ಸಿಕ್ಕಿದೆ. ನಾನು ತಪ್ಪು ಮಾಡಿಲ್ಲ: ಕೋರ್ಟ್‌ಆದೇಶದ ಬಳಿಕ ಡಿಕೆಶಿ ಫಸ್ಟ್ ರಿಯಾಕ್ಷನ್ ‌

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿಗೆ ರಿಲೀಫ್ ಸಿಕ್ಕಿದೆ. ಪ್ರಕರಣ ಸಂಬಂಧ ವಾದ- ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ರಾಜ್ಯ ಸರ್ಕಾರದ ಆದೇಶವನ್ನು ಇದುವರೆಗೂ ಯಾರೂ ಪ್ರಶ್ನೆ ಮಾಡಿಲ್ಲ. ಹೀಗಾಗಿ ಸಿಬಿಐ ಪರ ವಕೀಲರ ವಾದ ಪರಿಗಣಿಸಲು ಸಾಧ್ಯವಿಲ್ಲ. ಅರ್ಜಿದಾರರು ಮನವಿ ಹಿಂಪಡೆಯಲಾಗಿದೆ ಎಂದು ಸಿಬಿಐ ವಾದವನ್ನು ಹೈಕೋರ್ಟ್ ವಿಭಾಗೀಯ ಪೀಠ ತಳ್ಳಿ ಹಾಕಿದೆ. ಈ ಮೂಲಕ ಡಿಕೆಶಿಗೆ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಿದೆ.ಕೋರ್ಟ್ ಆದೇಶದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಯಾರು ಯಾರು ಏನು ಮಾತನಾಡಿದ್ದಾರೆ ಎಲ್ಲ ನಮ್ರತೆಯಿಂದ ನೋಡ್ತಿದ್ದೇನೆ, ಸೂಕ್ತ ಸಮಯದಲ್ಲಿ ಅದಕ್ಕೆಲ್ಲ ಉತ್ತರ ಕೊಡ್ತೇನೆ. ನಾನೇನು ತಪ್ಪು ಮಾಡಿಲ್ಲ. ನಾನು ಮಾಡಿದ್ದೆಲ್ಲ ಪಾರ್ಟಿ ಸಲುವಾಗಿ ಮಾಡಿದ ಕೆಲಸ. ಪಕ್ಷಕ್ಕೋಸ್ಕರ ನಾನು ಕೆಲಸ ಮಾಡಿದ್ದು. ಸಾಕಷ್ಟು ಅನುಭವಿಸಿದ್ದೇನೆ. ಮುಂದೆಯೂ ಕೂಡ ತೊಂದರೆ ಕೊಡ್ತೀನಿ ಅಂದ್ರೆ ಅದನ್ನು ನೋಡಲು ಭಗವಂತ ಇದ್ದಾನೆ. ನನಗೆ ತೊಂದರೆ ಕೊಟ್ಟಿದ್ದಕ್ಕೆ ಏನಾಯ್ತು ಅಂತ ರಾಜ್ಯದ ಜನರೇ ನೋಡಿದ್ದಾರೆ. ನ‌ನ್ನ ಪರವಾಗಿ ನಿಂತ ಎಲ್ಲರಿಗೂ ಕೋಟಿ ವಂದನೆ ಅಂತ ತಿಳಿಸಿದರು.
.

Leave a Reply

Your email address will not be published. Required fields are marked *