ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಮಾಯಣದಲ್ಲಿ ಮಹತ್ವದ ಸ್ಥಾನ ಪಡೆದಿರುವ ಆಂಧ್ರಪ್ರದೇಶದ ಲೇಪಾಕ್ಷಿಯ ವೀರಭದ್ರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.ಸೀತಾ ಮಾತೆಯನ್ನು ರಾವಣ ಅಪಹರಿಸುವಾಗ ಜಟಾಯು ಇದೇ ಜಾಗದಲ್ಲಿ ಆತನನ್ನು ಬೆನ್ನಟ್ಟಿ ಹೋರಾಟ ನಡೆಸಿತ್ತು. ಬಳಿಕ ರಾವಣನ ದಾಳಿಯಿಂದ ನೆಲಕ್ಕೆ ಬಿದ್ದು ಸಾಯುವ ಸ್ಥಿತಿಯಲ್ಲಿದ್ದ ಜಟಾಯು ಸೀತಾ ದೇವಿಯನ್ನು ರಾವಣ ಅಪಹರಿಸಿದ ವಿಚಾರವನ್ನು ಶ್ರೀರಾಮನಿಗೆ ತಿಳಿಸಿ ಪ್ರಾಣ ಬಿಟ್ಟಿತ್ತು. ಬಳಿಕ ರಾಮ ಜಟಾಯುವಿನ ಅಂತ್ಯಕ್ರಿಯೆ ನಡೆಸಿ ಮೋಕ್ಷ ಕಲ್ಪಿಸಿದ್ದ ಎಂಬ ಪ್ರತೀತಿ ಇದೆ.