ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಶಾಸ್ತ್ರೋಕ್ತವಾಗಿ ನೆರವೇರಿದ್ದು- ರಾಜ್ಯದ ನಾಯಕರಲ್ಲಿ ಹರ್ಷೋದ್ಘಾರ

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಶಾಸ್ತ್ರೋಕ್ತವಾಗಿ ನೆರವೇರಿದ್ದು, ರಾಜ್ಯದ ನಾಯಕರೂ ಸಂತಸಗೊಂಡಿದ್ದಾರೆ.ಮಧ್ಯಾಹ್ನ 12 ಗಂಟೆ 30 ನಿಮಿಷ 32 ಸೆಕೆಂಡ್‌ಗಳ ಮಧ್ಯೆ ಅಭಿಜಿತ್‌ಮುಹೂರ್ತದಲ್ಲಿ ಶಾಸ್ತ್ರೋಕ್ತವಾಗಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಅರ್ಚಕರು, ಪಂಡಿತರು ಹಾಗೂ ಯಜಮಾನ ಸ್ಥಾನದಲ್ಲಿದ್ದ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಪ್ರಾಣಪ್ರತಿಷ್ಠೆ ನೆರವೇರಿತು. ಆರ್‌ಎಸ್‌ಎಸ್‌ಮುಖ್ಯಸ್ಥ ಮೋಹನ್‌ಭಾಗವತ್‌, ಸಿಎಂ ಯೋಗಿ ಆದಿತ್ಯನಾಥ್‌, ಗುಜರಾತ್‌ರಾಜ್ಯಪಾಲೆ ಆನಂದಿಬೆನ್‌ಪಟೇಲ್‌ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರಮುಖ ನಾಯಕರು ಶುಭ ಸಂದೇಶವನ್ನು ಹಂಚಿಕೊಂಡಿದ್ದಾರೆ.ಹೆಚ್‌.ಡಿ ಕುಮಾರಸ್ವಾಮಿ:ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾದ ಪುಣ್ಯ ನನ್ನದಾಯಿತು. ಈ ದೈವ ಕಾರ್ಯದಲ್ಲಿ ಪೂಜ್ಯ ತಂದೆ-ತಾಯಿ ಅವರೊಂದಿಗೆ ಭಾಗವಹಿಸಿದ್ದು ನನಗೆ ಧನ್ಯತೆಯ ಅನುಭೂತಿ ನೀಡಿದೆ. ನಿಖಿಲ್‌ಕುಮಾರಸ್ವಾಮಿ ಅವರು ಸಹ ಈ ದಿವ್ಯಕ್ಷಣಕ್ಕೆ ಸಾಕ್ಷಿಯಾದರು. ಬಿ.ಎಸ್‌ಯಡಿಯೂರಪ್ಪ:ಭಾರತೀಯರ ಆರಾಧ್ಯದೈವ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರ ಮತ್ತೆ ಅಯೋಧ್ಯೆಯ ರಾಮ ಜನ್ಮಭೂಮಿಯ ಪವಿತ್ರ ಸನ್ನಿಧಾನದಲ್ಲಿ, ಭವ್ಯ ಶ್ರೀರಾಮ ಮಂದಿರದಲ್ಲಿ ವಿರಾಜಮಾನನಾಗಿದ್ದಾನೆ. ಕೋಟ್ಯಂತರ ಭಕ್ತರ ಶತ ಶತಮಾನಗಳ ತಪಸ್ಸು ಇಂದು ಸಾಕಾರಗೊಂಡಿದೆ. ಈ ಕ್ಷಣದ ಸಾರ್ಥಕ ಅನುಭೂತಿಯನ್ನು ಶಬ್ದಗಳಲ್ಲಿ ವರ್ಣಿಸಲಾಗದು. ಪ್ರಭು ಶ್ರೀರಾಮಲಲಾನ ಅನುಗ್ರಹ ಎಲ್ಲ ಭಕ್ತರ ಮೇಲೆ, ಭಾರತದೇಶದ ಮೇಲೆ ನಿರಂತರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ.

Leave a Reply

Your email address will not be published. Required fields are marked *