ಆದಾಯಕ್ಕಿಂತ ಹೆಚ್ಚಿನ ಯೋಜನೆಗಳ ಘೋಷಣೆಯಿಂದ ಬಿಬಿಎಂಪಿಗೆ ₹13000 ಕೋಟಿ ಬಿಲ್‌ಬಾಕಿ!

ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಯು 2024-25ನೇ ಸಾಲಿನ ಆಯವ್ಯಯ ಸಿದ್ಧಪಡಿಸುತ್ತಿವೆ. ರಾಜಧಾನಿ ಬೆಂಗಳೂರಿಗೆ ಭರಪೂರ ಘೋಷಣೆ ಮಾಡುವ ಸಾಧ್ಯತೆಗಳಿವೆ. ಆದರೆ, ಬಿಬಿಎಂಪಿ ಈ ಹಿಂದಿನ ವರ್ಷಗಳಲ್ಲಿ ಬಜೆಟ್‌ನಲ್ಲಿ ಘೋಷಣೆ ಮಾಡಿ ಕೈಗೊಂಡ ಕಾಮಗಾರಿಗಳಿಗೆ ಬರೋಬ್ಬರಿ ₹13,657 ಕೋಟಿ ಬಾಕಿ ಬಿಲ್‌ಪಾವತಿಯ ಹೊಣೆಗಾರಿಯನ್ನು ಹೊಂದಿದೆ. ಈ ಮೊತ್ತವು ಬಿಬಿಎಂಪಿಯು 2024-25ನೇ ಸಾಲಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನ ಒಳಗೊಂಡು ಘೋಷಣೆ ಮಾಡುವ ಬಜೆಟ್‌ಮೊತ್ತಕ್ಕಿಂತ ಹೆಚ್ಚಾಗಿದೆ.

Leave a Reply

Your email address will not be published. Required fields are marked *