ಆಪ್ತರಿಗೆ ಸಿಬಿಐ ನೋಟಿಸ್‌ಮುಂದೆ ನನಗೂ ವೈಯಕ್ತಿಕವಾಗಿ ನೋಟಿಸ್ ಕೊಡ್ತಾರೆ ಪೊಲಿಟಿಕಲ್‌ಸೇಫ್‌ಗೇಮ್‌ಆಡಲು ಮುಂದಾದ ಡಿಕೆಶಿ

ಸರ್ಕಾರ ಕೇಸ್‌ವಾಪಸ್ ಪಡೆದ ನಂತರ ಸೇಫ್ ಎಂದುಕೊಂಡಿದ್ದ ಡಿಸಿಎಂ ಡಿಕೆ ಶಿವಕುಮಾರ್‌ಗೆ ಸಿಬಿಐ ಶಾಕ್ ನೀಡಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ಕುಟುಂಬಕ್ಕೆ ಹಾಗೂ ವ್ಯಾವಹಾರಿಕ ಆಪ್ತರಿಗೆ ಸಿಬಿಐ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಮುಂದೆ ನನಗೂ ವೈಯಕ್ತಿಕವಾಗಿ ನೋಟಿಸ್ ಕೊಡ್ತಾರೆ ಎನ್ನುವ ಮೂಲಕ ಡಿಕೆಶಿ ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ. ಇದು ರಾಜಕೀಯವಾಗಿ ನನ್ನನ್ನು ಮುಗಿಸುವ ಷಡ್ಯಂತ್ರ ಎನ್ನುವ ಮೂಲಕ ಪೊಲಿಟಿಕಲ್ ಸೇಫ್ ಗೇಮ್ ಆಡುತ್ತಿದ್ದಾರೆ. ಸರ್ಕಾರ ಕೇಸಿನ ಶಿಫಾರಸ್ಸನ್ನು ವಾಪಸ್‌ಪಡೆದ ನಂತರವೂ ಸಿಬಿಐ ತಮ್ಮ ವಿರುದ್ಧ ಬಿದ್ದಿಗೆ ಬಿದ್ದಿದೆ. ಇದರ ಹಿಂದೆ ರಾಜಕೀಯ ಎದುರಾಳಿಗಳಾದ ದೊಡ್ಡ ದೊಡ್ಡವರ ಕೈವಾಡವಿದೆ ಎನ್ನುವುದು ಡಿಕೆಶಿ ಆರೋಪ.

Leave a Reply

Your email address will not be published. Required fields are marked *