ಇಂಥ ನೂರು ಸಿದ್ದರಾಮಯ್ಯನವರು ಬಂದರೂ ರಾಮಭಕ್ತರು ಹೆದರುವುದಿಲ್ಲ: ವಿರೋಧ ಪಕ್ಷದ ನಾಯಕ ಆರ್‌ಅಶೋಕ್‌

ಶ್ರೀರಾಮ ಈ ದೇಶದ ಆದರ್ಶ ಪುರುಷ. ರಾಮ ಮಂದಿರಕ್ಕಾಗಿ 500- 600 ವರ್ಷಗಳಿಂದ ನಡೆದಿದೆ. ದಾಳಿಕೋರರು ರಾಮಮಂದಿರ ಧ್ವಂಸ ಮಾಡಿದ್ದರು. ವಿಜಯನಗರ ಹಂಪಿ ದೇವಾಲಯ, ಸೋಮನಾಥ ದೇವಾಲಯಗಳ ಮೇಲೆ ದಾಳಿ ನಡೆದಿತ್ತು. ಇಂಥ ನೂರು ಸಿದ್ದರಾಮಯ್ಯನವರು ಬಂದರೂ ರಾಮಭಕ್ತರು ಹೆದರುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್‌ಅಶೋಕ್‌.ಮಾಧ್ಯಮಗಳ ಜೊತೆಗೆ ಮಾತನಾಡಿ ಹೇಳಿದರು. ರಾಮಮಂದಿರ ಸಂಬಂಧ ಜಾಗೃತಿಯಿಂದ ಕಾಂಗ್ರೆಸ್‍ನವರಿಗೆ ಭಯ ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿ ಉಂಟಾಗಿದೆ. ರಾಮಭಕ್ತರಿಗೆ ಭಯ ಮೂಡಿಸಲು ಈ ಕುತಂತ್ರ ಎಂದು ಕಾಂಗ್ರೆಸ್‌ವಿರುದ್ಧ ಕಿಡಿಕಾರಿದರು.ಬಿಜೆಪಿ ಮುಂದೆ ಸಿದ್ದರಾಮಯ್ಯನವರ ಸರಕಾರವು ಭೂತದಂತೆ ನಿಂತಿದೆ. ಹುಬ್ಬಳ್ಳಿಯಲ್ಲಿ 30 ವರ್ಷಗಳ ಹಿಂದಿನ ಕೇಸನ್ನು ಇದೀಗ ತೆರೆದು ನೋಟಿಸ್ ಕೊಡದೆ ಬಂಧಿಸುವ ಕಾರ್ಯ ನಡೆದಿದೆ. ಕಾಂಗ್ರೆಸ್ ಮತ ರಾಜಕೀಯಕ್ಕಾಗಿ ಹಿಂದೂ- ಮುಸಲ್ಮಾನರನ್ನು ಒಡೆಯುವ ಕೆಲಸ ಮಾಡುತ್ತಿದೆ. ಅಕ್ಷತೆ ಕೊಡುವುದಕ್ಕೂ ಅಡ್ಡಿ ಉಂಟು ಮಾಡುತ್ತಿದ್ದಾರೆ. ಇದು ಟಿಪ್ಪು ಸರಕಾರವೇ ಎಂದು ಪ್ರಶ್ನಿಸಿದರು. ರಾವಣನೂ ಅಧಿಕಾರ ಕಳಕೊಂಡ. ನೀವು ಉಳಿಯುವುದಿಲ್ಲ ರಾಮರಾಜ್ಯವೂ ಮುಂದೆ ಮೋದಿಜೀ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಭರವಸೆಯಿಂದ ನುಡಿದರು. ಇಂದು ಇಡೀ ರಾಜ್ಯದಲ್ಲಿ ಬಿಜೆಪಿ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *