ಇಸ್ರೇಲ್-ಹಮಾಸ್ ಯುದ್ಧದ ನಡುವೆ ಸಿಲುಕಿರುವ ಭಾರತೀಯರನ್ನು ಕರೆತರಲು ಆಪರೇಷನ್ ಅಜಯ್ ಅನ್ನು ಪ್ರಾರಂಭಿಸಲಾಗಿದೆ ಇಂದು ರಾತ್ರಿ ಇಸ್ರೇಲ್‌ನಿಂದ ಆಗಮಿಸಲಿದೆ ಭಾರತೀಯರನ್ನು ಹೊತ್ತ ಮೊದಲ ವಿಮಾನ

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಟೆಲ್ ಅವಿವ್‌ನಿಂದ ದೆಹಲಿಗೆ ಚಾರ್ಟರ್ಡ್ ಫ್ಲೈಟ್ ಅನ್ನು ಕಳುಹಿಸಿರುವುದಾಗಿ ವಿದ್ಯಾರ್ಥಿಗಳಿಗೆ ಮೇಲ್ ಸಂದೇಶ ಕಳುಹಿಸಿದೆ. ಈ ವಿಮಾನ ಇಂದು ಇಸ್ರೇಲ್ ಕಾಲಮಾನ ರಾತ್ರಿ ಸುಮಾರು 9 ಗಂಟೆಗೆ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಲಿದೆ.ಭಾರತೀಯ ವಿದ್ಯಾರ್ಥಿಗಳಿಗೆ ಮೇಲ್‌ನಲ್ಲಿ ಗೂಗಲ್ ಫಾರ್ಮ್ ಅನ್ನು ಭರ್ತಿ ಮಾಡಲು ಕೇಳಲಾಗಿದೆ. ನಂತರ ಅವರು ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತಾರೆ. ಒಂದು ಚೆಕ್ ಇನ್ ಲಗೇಜ್ 23 ಕೆ.ಜಿ ಗಿಂತ ಹೆಚ್ಚಿರಬಾರದು ಮತ್ತು ಒಂದು ಕ್ಯಾಬಿನ್ ಲಗೇಜ್ ಅನ್ನು ಅನುಮತಿಸಲಾಗುವುದು ಎಂದು ಮೇಲ್‌ನಲ್ಲಿ ತಿಳಿಸಲಾಗಿದೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ ಬಳಿಕ ಎರಡೂ ಪ್ರದೇಶಗಳಲ್ಲಿ ಯುದ್ಧದ ಸ್ಥಿತಿ ತೀವ್ರಗೊಂಡಿದೆ. ಸಾವಿನ ಸಂಖ್ಯೆ 4,000ಕ್ಕೆ ಹತ್ತಿರವಾಗುತ್ತಿದ್ದಂತೆ ಭಾರತೀಯ ನಾಗರಿಕರನ್ನು ಇಸ್ರೇಲ್‌ನಿಂದ ಏರ್‌ಲಿಫ್ಟ್ ಮಾಡಲು ಭಾರತ ಆಪರೇಷನ್ ಅಜಯ್ ಅನ್ನು ಪ್ರಾರಂಭಿಸಿದೆ.

Leave a Reply

Your email address will not be published. Required fields are marked *