ಕನ್ನಡಿಗರಿಗೆ ಒಲಿಯದ ಕಾವೇರಿ: ಮುಂದಿನ 15 ದಿನ ತಮಿಳುನಾಡಿಗೆ 3,000 ಕ್ಯೂಸೆಕ್‌ನೀರು ಹರಿಸಲು ಕರ್ನಾಟಕಕ್ಕೆ CWRC ಸೂಚನೆ

ಕರ್ನಾಟಕದಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಈ ಹಿಂದೆ 226 ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ಹಲವು ನಗರಗಳಿಗೆ ಕುಡಿಯಲು ಕಾವೇರಿ ನೀರಿನ ಸಮಸ್ಯೆಯಾಗಲಿದೆ ಎಂದು ಕರ್ನಾಟಕ ಸರ್ಕಾರ ಆತಂಕದಲ್ಲಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡು ಸರ್ಕಾರ ನಮ್ಮ ರೈತರ ಬೆಳೆಗಳು ಒಣಗುತ್ತಿವೆ ಮುಂದಿನ 15 ದಿನಗಳಲ್ಲಿ ತಲಾ 13,000 ಕ್ಯೂಸೆಕ್‌ನೀರು ಹರಿಸುವಂತೆ ಸಿಡಬ್ಲ್ಯುಆರ್‌ಸಿ ಸಭೆಯಲ್ಲಿ ವಾದವನ್ನು ಮಂಡಿಸಿದೆ. ಆದರೆ, ಸಭೆಯಲ್ಲಿ ಕರ್ನಾಟಕದ ಸಂಕಷ್ಟವನ್ನು ಪರಿಗಣಿಸಿದ ಸಿಡಬ್ಲ್ಯೂಆರ್‌ಸಿ ಮುಂದಿನ 15 ದಿನಗಳ ಕಾಲ ತಲಾ 3,000 ಕ್ಯೂಸೆಕ್‌ನೀರು ಹರಿಸುವಂತೆ ಆದೇಶ ಹೊರಡಿಸಿದೆ. ಇದರಿಂದ ಕರ್ನಾಟಕಕ್ಕೆ ಭಾರಿ ದೊಡ್ಡ ಹಿನ್ನಡೆಯಾಗಿದ್ದು, ಕುಡಿಯುವ ನೀರಿಗೂ ಹಾಹಾಕಾರ ಶುರುವಾಗುವ ಲಕ್ಷಣಗಳು ಕಂಡುಬರುತ್ತಿವೆ.

Leave a Reply

Your email address will not be published. Required fields are marked *