ಕೆಐಆರ್‌ಡಿಎಲ್ ಇಇ ಮನೆ ಮೇಲೆ ಲೋಕಾ ದಾಳಿ – ಆದಾಯಕ್ಕಿಂತಲೂ 165 ಪಟ್ಟು ಅಧಿಕ ಆಸ್ತಿ ಪತ್ತೆ

ಇಂದು ರಾಜ್ಯದ ವಿವಿಧ ಭಾಗಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತುಮಕೂರಿನ ಕೆಐಆರ್‌ಡಿಎಲ್‌ನ ಮಧುಗಿರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಹನುಮಂತರಾಯಪ್ಪ ಅವರ ಮನೆಯ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತುಮಕೂರು ಲೋಕಾಯುಕ್ತ ಎಸ್‍ಪಿ ವಲಿ ಭಾಷಾ ಅವರ ನೇತೃತ್ವದಲ್ಲಿ ಮೂವರು ಡಿವೈಎಸ್‍ಪಿಗಳು ಸೇರಿದಂತೆ ಆರು ತಂಡಗಳು ಆರು ಕಡೆಗಳಲ್ಲಿ ದಾಳಿ ನಡೆಸಿವೆ. ಎಸ್‍ಪಿ ವಲಿ ಭಾಷಾ ಈ ಬಗ್ಗೆ ವಿವರ ನೀಡಿದರು, ಕಾರ್ಯಪಾಲಕ ಇಂಜಿನಿಯರ್ ಹನುಮಂತರಾಯಪ್ಪ ಅವರು 1996ರಲ್ಲಿ ಕೆಲಸಕ್ಕೆ ಸೇರಿದ್ದರು. ಅವರ ಆದಾಯಕ್ಕಿಂತ 165 ಪಟ್ಟು ಆಸ್ತಿ ಹೊಂದಿರುವ ವಿಚಾರ ಬೆಳಕಿಗೆ ಬಂದಿದೆ. ಒಟ್ಟು 3.69 ಕೋಟಿ ರೂ.ಗಳಷ್ಟು ಆಸ್ತಿ ಗಳಿಸಿರುವುದು ಲೋಕಾಯುಕ್ತ ದಾಳಿಯಿಂದ ತಿಳಿದು ಬಂದಿದೆ. ಅವರ ಆಸ್ತಿಯಲ್ಲಿ ಮೂರು ಅಂತಸ್ತಿನ 3 ಮನೆಗಳು, ಗುಬ್ಬಿ ತಾಲೂಕಿನಲ್ಲಿ 8 ಎಕರೆ ಜಮೀನನ್ನು ಖರೀದಿಸಿದ್ದಾರೆ. ಮಧುಗಿರಿ ಪಟ್ಟಣದಲ್ಲಿ ಎರಡು ನಿವೇಶನ, ಮಲ್ಲಸಂದ್ರ ಹಾಗೂ ಬಡಕನಪಾಳ್ಯದಲ್ಲಿ ತಲಾ ಒಂದೊಂದು ಫಾರ್ಮ್ ಹೌಸ್ ಇರುವುದು ತಿಳಿದು ಬಂದಿದೆ. ಸಿರಾ ಗೇಟ್‍ನ ಮನೆಯಲ್ಲಿ ಬೆಳ್ಳಿ ಮತ್ತು ಚಿನ್ನದ ಆಭರಣಗಳು ಪತ್ತೆಯಾಗಿವೆ. ಸುಮಾರು 300 ಗ್ರಾಂ ಚಿನ್ನದ ಒಡವೆಗಳು, 500 ಗ್ರಾಂ ಬೆಳ್ಳಿ ಆಭರಣಗಳು ಪತ್ತೆಯಾಗಿವೆ.

Leave a Reply

Your email address will not be published. Required fields are marked *