ಗುಜರಾತ್ನಿಂದ ಜೆ.ಪಿ ನಡ್ಡಾ, ಮಹಾರಾಷ್ಟ್ರದಿಂದ ಅಶೋಕ್ ಚವಾಣ್ಗೆ ರಾಜ್ಯಸಭಾ ಟಿಕೆಟ್

ಗುಜರಾತ್ ಮತ್ತು ಮಹಾರಾಷ್ಟ್ರದಿಂದ ರಾಜ್ಯಸಭಾ ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಗುಜರಾತ್ನಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಮಹಾರಾಷ್ಟ್ರದಿಂದ ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡ ಅಶೋಕ್ ಚವಾಣ್ ರಾಜ್ಯಸಭಾ ಟಿಕೆಟ್ ಪಡೆದಿದ್ದಾರೆ.ಪಕ್ಷ ಬಿಡುಗಡೆ ಮಾಡಿರುವ ಹೊಸ ಪಟ್ಟಿಯಲ್ಲಿ ಗುಜರಾತ್ನ ನಾಲ್ವರು ಅಭ್ಯರ್ಥಿಗಳ ಹೆಸರುಗಳಿವೆ. ಜೆಪಿ ನಡ್ಡಾ ಅವರಲ್ಲದೆ, ಗುಜರಾತ್ನಿಂದ ಗೋವಿಂದ್ ಭಾಯಿ ಧೋಲಾಕಿಯಾ, ಮಾಯಾಂಕ್ಭಾಯ್ ನಾಯಕ್ ಮತ್ತು ಡಾ. ಜಶ್ವಂತ್ ಸಿಂಗ್ ಸಲಾಂ ಸಿಂಗ್ ಪರ್ಮಾರ್ ಅವರನ್ನು ರಾಜ್ಯಸಭಾ ಅಭ್ಯರ್ಥಿಗಳಾಗಿ ಪಕ್ಷ ಘೋಷಿಸಿದೆ. ಇತ್ತ ಮಹಾರಾಷ್ಟ್ರದಿಂದ ಅಶೋಕ್ ಚವಾಣ್ ,ಮೇಧಾ ಕುಲಕರ್ಣಿ ಮತ್ತು ಡಾ. ಅಜಿತ್ ಗೋಪ್ಚಾಡೆ ಅವರಿಗೆ ಪಕ್ಷ ರಾಜ್ಯಸಭಾ ಟಿಕೆಟ್ ನೀಡಿದೆ.

Leave a Reply

Your email address will not be published. Required fields are marked *