ತೆರಿಗೆಯಿಂದ 100 ರೂ. ಸಂಗ್ರಹವಾದರೆ ರಾಜ್ಯಕ್ಕೆ ಸಿಗುವುದು ಕೇವಲ 13 ರೂ.- ಕೇಂದ್ರದಿಂದ ಪದೇ ಪದೇ ಅನ್ಯಾಯ: ಫೆ.7 ರಂದು ಪ್ರತಿಭಟನೆ ಸಿದ್ದರಾಮಯ್ಯ ಕಿಡಿ

ವಿಧನಸೌಧದಲ್ಲಿ ಸುದೀರ್ಘ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪದೇ ಪದೇ ಕೇಂದ್ರ ಸರ್ಕಾರ ತೆರಿಗೆ ವಿಚಾರದಲ್ಲಿ ಅನ್ಯಾಯ ಮಾಡುತ್ತಿದೆ. ಕೇಂದ್ರ ಬಜೆಟ್ ಗಾತ್ರ ಡಬಲ್‌ಆದರೆ ರಾಜ್ಯಕ್ಕೆ ಕೊಡಬೇಕಾದ ಪಾಲು ಡಬಲ್‌ಆಗ್ಬೇಕು ಅಲ್ವಾ? ನಮ್ ಪಾಲು ಡಬಲ್‌ಆಗಲಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ. ಕಳೆದ 4 ವರ್ಷದಲ್ಲಿ ತೆರಿಗೆ ಹಂಚಿಕೆ ಕಡಿತದಿಂದ ಕರ್ನಾಟಕಕ್ಕೆ 45 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ. ಈ ಕಾರಣಕ್ಕೆ ಪಕ್ಷತೀತವಾಗಿ ಫೆ.7 ರಂದು ಪ್ರತಿಭಟನೆ ನಡೆಯಲಿದ್ದು ರಾಜ್ಯ ಎಲ್ಲಾ ಶಾಸಕರು, ಸಂಸದರು ಕೈ ಜೋಡಿಸಬೇಕೆಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *