ನನ್ನನ್ನು ಒಂದು ದಿನ ಸಹ ವಿಚಾರಣೆಗೆ ಕರೆಸಿಲ್ಲ. 90% ತನಿಖೆ ಪೂರ್ಣ ಹೇಗೆ ಆಗುತ್ತೆ: ಡಿಕೆಶಿ ಪ್ರಶ್ನೆ

ಅದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಹೈಕೋರ್ಟ್ ಅಸ್ತು ಅಂದಿರುವ ವಿಚಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಬೆಂಗಳೂರಿನ ಕೇಂಪೇಗೌಡ ಏರ್‌ಪೋರ್ಟ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಕರಣದಲ್ಲಿ ಎಫ್‌ಐಆರ್ ಹಾಕಿರೋದು ಸರಿ ಇಲ್ಲ ಅಂತ ನ್ಯಾಯಾಲಯಕ್ಕೆ ಹೋಗಿದ್ದೆ. ಯಡಿಯೂರಪ್ಪ ಸರ್ಕಾರ ಇದ್ದಾಗ ಸಿಬಿಐಗೆ ತನಿಖೆಗೆ ಅವಕಾಶ ಕೊಟ್ಟಿದ್ರು. ನನ್ನ ಒಂದು ದಿನ ಸಹ ವಿಚಾರಣೆಗೆ ಕರೆಸಿಲ್ಲ ಈಗ 90% ರಷ್ಟು ತನಿಖೆ ಪೂರ್ಣ ಆಗಿದೆ ಅಂತ ಹೇಳಿದ್ದಾರೆ. ನನ್ನನ್ನು ಕರೆದು ನನ್ನ ಆಸ್ತಿಯನ್ನು ಕೇಳಬೇಕು. ನನ್ನ ಆಸ್ತಿ ಯಾವುದು? ನನ್ನ ಹೆಂಡತಿಯ ಆಸ್ತಿ ಯಾವುದು ಅಂತ ಕೇಳಬೇಕು. ಅದು ಹೇಗೆ 90% ರಷ್ಟು ತನಿಖೆ ಪೂರ್ಣ ಮಾಡಿದ್ದಾರೋ ನನಗೆ ಅರ್ಥ ಆಗುತ್ತಿಲ್ಲ. ನ್ಯಾಯಾಲಯದ ಬಗ್ಗೆ ನನಗೆ ನಂಬಿಕೆ ಇದೆ. ಕಾನೂನು ಚೌಕಟ್ಟಿನಲ್ಲೇ ಉತ್ತರ ಕೊಡುತ್ತೇನೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಈಗಷ್ಟೇ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. 3 ತಿಂಗಳ ಒಳಗಾಗಿ ತನಿಖೆ ಪೂರ್ಣ ಮಾಡಲು ಹೇಳಿದ್ದಾರೆ, ನೋಡೋಣ. ನನಗೆ ನೋಟಿಸ್ ಕೊಟ್ಟು ಕರೆದು ಉತ್ತರ ಕೇಳಿ ಏನೇನು ಮಾಡ್ತಾರೋ ಎಂದರು. ಪ್ರಕರಣದಲ್ಲಿ ಬಿಜೆಪಿಯವರ ರಾಜಕೀಯ ಪ್ರೇರಿತ ಇದ್ದರೂ ನನಗೆ ಭರವಸೆ ಇದೆ. ಕಾನೂನು ಚೌಕಟ್ಟಿನಲ್ಲಿಯೇ ಇದ್ದೇನೆ. ಕಾನೂನಡಿಯೇ ಉತ್ತರ ಕೊಡುತ್ತೇನೆ. ಬಿಜೆಪಿಯವರು ಏನೇ ಷಡ್ಯಂತ್ರ ಮಾಡಿದರೂ ಕೂಡ ನ್ಯಾಯಾಲಯಕ್ಕೆ ನನ್ನ ಎಲ್ಲಾ ಪಟ್ಟಿ ಕೊಡುತ್ತೇನೆ. ಎಂದು ಹೇಳಿದರು.

Leave a Reply

Your email address will not be published. Required fields are marked *