ನಮ್ಮ ಮೆಟ್ರೋ ಸಾರಿಗೆ ಪ್ರಯಾಣಿಕರನ್ನು ಉತ್ತಜಿಸುವ ಮೂಲಕ -ಟ್ರಾಫಿಕ್ ಕಡಿಮೆಗಾಗಿ ಸಾರಿಗೆ ನೀತಿ ಬದಲಾಯಿಸಿ: BMRCL

ನಮ್ಮ ಮೆಟ್ರೋ ಸಾರಿಗೆ ಪ್ರಯಾಣಿಕರನ್ನು ಉತ್ತಜಿಸುವ ಮೂಲಕ ನಗರದ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸಾರಿಗೆ ನೀತಿಯಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತರಲು ಬಿಎಂಆರ್‌ಸಿಎಲ್ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲು ಶೇರ್ ಆಟೋಗಳಿಗೆ ಅನುಮತಿ ನೀಡುವ ಜೊತೆಗೆ ನಗರದಲ್ಲಿ ಕಾರ್ಯಾಚರಣೆಯಲ್ಲಿ ಬಿಎಂಟಿಸಿಗೆ ನೀಡಲಾದ ಏಕಸ್ವಾಮ್ಯವನ್ನು ಬದಲಾಯಿಸುವಂತೆ ಮನವಿ ಮಾಡಿದೆ.ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಅವರು ಬ್ರಾಂಡ್ ಬೆಂಗಳೂರು ಉಪಕ್ರಮ ಸಂಬಂಧ ಸರ್ಕಾರ ಮತ್ತು ಪೊಲೀಸ್ ಇಲಾಖೆಗಳ ಪ್ರಸ್ತುತ ಮತ್ತು ಹಿಂದಿನ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ವೇಳೆ ಇಂತದ್ದೊಂದು ಮನವಿಯನ್ನು ಬಿಎಂಆರ್‌ಸಿಎಲ್ ಸರ್ಕಾರಕ್ಕೆ ಮಾಡಿದೆ ಎಂದು TNIE ವರದಿ ಮಾಡಿದೆ.

Leave a Reply

Your email address will not be published. Required fields are marked *